15 ಅಂಗಡಿ ಮೇಲೆ ದಾಳಿ, ತಂಬಾಕು ಉತ್ಪನ್ನ ವಶ

pan masala
Published on

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಪಾನಬೀಡಾ, ಕಿರಾಣಿ ಮತ್ತು ಬಾರ್‌ಗಳು ಸೇರಿ 15 ಅಂಗಡಿಗಳ ಮೇಲೆ ಆರೋಗ್ಯ ಇಲಾಖೆ ಮತ್ತು ಪೊಲೀಸರು ದಾಳಿ ಮಾಡಿ ತಂಬಾಕು ಉತ್ಪನ್ನ ವಶಪಡಿಸಿಕೊಂಡು ದಂಡ ವಿಧಿಸಿದರು. ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಫ್.ಬಿ ಹೂಗಾರ ಮಾತನಾಡಿ, ತಂಬಾಕು ಉತ್ಪನ್ನ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಧೂಮಪಾನ ವ್ಯಸನಿಗಷ್ಟೇ ಅಲ್ಲದೆ ಆರೋಗ್ಯಕರ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿ ಮಾಡುವುದು ಎಲ್ಲರ ಜವಾಬ್ದಾರಿ ಎಂದರು. ಬಿ.ಎಸ್. ಹಿರೇಮಠ, ಕೆ.ಎಂ. ಕುಲಕರ್ಣಿ, ಫಕೀರೇಶ ಜಂತ್ಲಿ, ಎಎಸ್‌ಐ ದೊಡ್ಡಮನಿ, ಸಿಡಿಪಿಒ ನಂದಾ ನವಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net