ಕೃಷಿ ಸಮಾಜದ ಕಾರ್ಯಕಾರಿ ಸಮಿತಿಗೆ 15 ಜನರ ಆಯ್ಕೆ

Published on

ಕೆ.ಆರ್.ಪೇಟೆ: ತಾಲೂಕಿನ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯಲ್ಲಿ 15 ಜನರು ಆಯ್ಕೆಯಾಗಿದ್ದು, ಮೂವರಿಗೆ ಸೋಲಾಗಿದೆ.

ಕಾರ್ಯಕಾರಿ ಸಮಿತಿಯ 15 ಸದಸ್ಯ ಸ್ಥಾನಕ್ಕೆ 24 ಜನ ನಾಮಪತ್ರ ಸಲ್ಲಿಸಿದರು. 6 ಜನ ನಾಮಪತ್ರ ಹಿಂಪಡೆದಿದ್ದರಿಂದ ಚುನಾವಣೆ ಕಣದಲ್ಲಿ 18 ಜನ ಉಳಿದಿದ್ದರು. ಭಾನುವಾರ ಬೆಳಗ್ಗೆ ಚುನಾವಣೆ ಮತದಾನ ನಡೆದಿದ್ದು 190 ಮತದಾರರಲ್ಲಿ 89 ಜನರು ಮತದಾನ ಮಾಡಿದ್ದರು. ಮಧ್ಯಾಹ್ನ 3 ಗಂಟೆಗೆ ಮತದಾನ ಮುಗಿದಿದ್ದು, ನಂತರ ಎಣಿಕೆ ಕಾರ್ಯ ಪ್ರಾರಂಭವಾಯಿತು.

ಕೆ.ಬಿ.ಈಶ್ವರಪ್ರಸಾದ್ 68, ಎನ್.ಎಸ್.ಗಂಗಾಧರ್ 74, ಆರ್.ಕೆ.ಜಗದೀಶ್ 67, ಜಾನಕೀರಾಮ್ ಎ.ಎನ್ 71, ಬಿ.ಎಲ್.ತೇಜಸ್ವಿ ಕಿರಣ್ 70, ಎಸ್.ಆರ್.ನವೀನ್‌ಕುಮಾರ್ 75, ನಾರಾಯಣಗೌಡ ಎಚ್.ಜೆ. 73, ಎಸ್.ಎನ್.ಪ್ರಭಾಕರ್ 65, ಎನ್.ಮರಿಸ್ವಾಮಿಗೌಡ 70, ಎ.ಆರ್.ರಘು 70, ರಮೇಶ್ ಎ.ಎಸ್ 71, ಸಿ.ಎನ್ ರಾಮಕೃಷ್ಣೇಗೌಡ 67, ರಾಮಸ್ವಾಮಿ 64, ಲಕ್ಷ್ಮೇಗೌಡ ಬಿ.ಎನ್. 69, ಸ್ವಾಮಿಗೌಡ ಬಿ.ಸಿ. 63 ಮತಗಳು ಪಡೆದು ವಿಜೇತರಾದರು. ಎಸ್.ಟಿ.ಜಯರಾಮು 12, ಬಿ.ಎಲ್.ರಂಗನಾಥೇಗೌಡ 22, ಕೆ.ಜೆ.ವಿಜಯ್‌ಕುಮಾರ್ 11 ಮತಗಳ ಪಡೆದು ಸೋಲಂಡರು.

ವಿಜೇತ ಸದಸ್ಯರಿಗೆ ಚುನಾವಣಾಧಿಕಾರಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷಕುಮಾರ್ ಎಚ್.ಜೆ. ಪ್ರಮಾಣ ಪತ್ರ ನೀಡಿದರು. ಚುನಾವಣಾ ಸಹಾಯಕರಾಗಿ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಟಿ.ಕೆ.ಶ್ರೀಧರ್, ಕೃಷಿ ಅಧಿಕಾರಿ ಅಭಿಷೇಕ್‌ಗೌಡ, ಕಚೇರಿ ಸಿಬ್ಬಂದಿ ಶಂಕರ್, ಯೋಗೇಶ್, ಲಿಖಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net