ಕುಖ್ಯಾತ 15 ದರೋಡೆಕೋರರ ಬಂಧನ

Crime
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ದಡ್ಡಿಕಮಲಾಪುರ ಗ್ರಾಮದ ಬಳಿಯ `ಮಮತಾ' ಫಾರ್ಮ್ಹೌಸ್‌ನಲ್ಲಿ ಆ. 13ರಂದು ರಾತ್ರಿ ನಡೆದಿದ್ದ ದರೋಡೆ ಯತ್ನ ಪ್ರಕರಣಕ್ಕೆ ಸಂಬ0ಧಿಸಿ ಗ್ರಾಮೀಣ ಠಾಣೆ ಪೊಲೀಸರು ಕುಖ್ಯಾತ 15 ದರೋಡೆಕೋರರನ್ನು ಬಂಽಸಿದ್ದಾರೆ.

ಆ. 13ರಂದು ಸುಮಾರು 8ರಿಂದ 10 ಜನರ ಗುಂಪು ಫಾರ್ಮ್ಹೌಸ್‌ಗೆ ನುಗ್ಗಿತ್ತು. ಅಲ್ಲಿ ಮಲಗಿದ್ದ ಕಣ್ಣಪ್ಪ ಜಡ್ಲಿ, ಹನುಮಂತ ಧನದಾವರ, ಅಶೋಕ ಪೋತಲಿ, ಲಕ್ಷ್ಮಣ ಚಂದರಗಿ ಎಂಬುವರಿಗೆ ಚಾಕು ತೋರಿಸಿ ಹೆದರಿಸಿದ್ದರು. ಅವರ ಕೈ ಕಾಲು ಕಟ್ಟಿ ಹಾಕಿ, ಮೊಬೈಲ್‌ಗಳು ಮತ್ತು ಇತರ ವಸ್ತುಗಳನ್ನು ದರೋಡೆ ಮಾಡಿದ್ದರು.

ಪ್ರಕರಣ ಭೇದಿಸಲು 8 ತಂಡಗಳನ್ನು ರಚಿಸಲಾಗಿತ್ತು. ಅಽಕಾರಿಗಳ ತಂಡ ಕಾರ್ಯಾಚರಣೆ ನಡೆಸಿ 15 ಜನ ಆರೋಪಿಗಳನ್ನು ಬಂಽಸಿದೆ. ಈ ಕಳ್ಳರ ವಿರುದ್ಧ ಬಳ್ಳಾರಿ, ರಾಯಚೂರು, ವಿಜಯನಗರ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು, ಇತರೆಡೆ ದರೋಡೆ ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net