ಕೆನಡಾದ ವೀಸಾ ಕೊಡಿಸುವುದಾಗಿ 15 ಲಕ್ಷ ರೂ. ವಂಚನೆ

Fruad
Published on

ಮಂಗಳೂರು: ಕುವೈಟ್‌ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುವ ಡೊಮಿನಿಕ್ ಕಿಶೋರ್ ಡಿಸೋಜ ಎಂಬವರಿಗೆ ಕೆನಡಾದ ವೀಸಾ ಕೊಡಿಸುವುದಾಗಿ ಹೇಳಿ 15 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಅವರ ತಂದೆ ಹೆರಾಲ್ಡ್ ಡಿಸೋಜ ಅವರು ಕಾವೂರು ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.


ಡೊಮಿನಿಕ್‌ನ ಸ್ನೇಹಿತನಾದ ಮಂಗಳೂರು ಗಂಜಿಮಠ ನಿವಾಸಿ ರೋಶನ್ ನವೀನ್ ಕ್ರಾಸ್ಟೋ ಎಂಬಾತನು ಪೋನ್ ಮೂಲಕ ಸಂಪರ್ಕಿಸಿ ಕೆನಡಾ ದೇಶದ ವೀಸಾವನ್ನು ಆತನನಿಗೆ ಪರಿಚಯವಿರುವ ಜೇಮ್ಸ್ ಡಿಸೋಜ ಎಂಬಾತ ಮಾಡಿಸಿಕೊಡುವುದಾಗಿ ಹಾಗೂ ಯಾರಿಗಾದರೂ ವೀಸಾ ಬೇಕಾಗಿದ್ದರೆ ತಿಳಿಸವಂತೆ ಹೇಳಿದ್ದ.


ಅದಂತೆ ಡೊಮಿನಿಕ್‌ಗೆ ರೋಶನ್ ನವೀನ್ ಕಳೆದ ಜನವರಿ ತಿಂಗಳ ಮೊದಲನೇ ವಾರದಲ್ಲಿ ೆನ್ ಮುಖಾಂತರ ಜೇಮ್ಸ್ ಡಿಸೋಜ ಎಂಬಾತನ ಪರಿಚಯ ಮಾಡಿ ಕೊಟ್ಟಿದ್ದ. 30 ಲಕ್ಷ ರೂ ಹಣ ನೀಡಿದರೆ ಡೊಮಿನಿಕ್ ಹಾಗೂ ಅವರ ಹೆಂಡತಿಗೆ ವೀಸಾ ಮಾಡಿಕೊಡುವುದಾಗಿ ಜೇಮ್ಸ್ ತಿಳಿಸಿದ್ದ. ಅದರಲ್ಲಿ 15 ಲಕ್ಷ ಹಣವನ್ನು ವೀಸಾ ಮಾಡುವ ಮೊದಲು ಹಾಗೂ ಉಳಿದ 15 ಲಕ್ಷ ಹಣವನ್ನು ಕೆನಡಾ ದೇಶಕ್ಕೆ ಹೊದ ನಂತರ ನೀಡಬೇಕೆಂದು ತಿಳಿಸಿದ್ದಾನೆ.
ಅದರಂತೆ ಸುಮಾರು 9 ಕಂತುಗಳಲ್ಲಿ 15 ಲಕ್ಷ ರೂ. ಪಾವತಿಸಿದ್ದು, ಅದರಲ್ಲಿ 5 ಲಕ್ಷವನ್ನು ಅವರ ಸಂಬಂಧಿ ಅರುಣ್ ಡೆರಿಕ್ ಮೊಂತೇರೊ ಅವರ ಖಾತೆಯ ಮೂಲಕ ಜೇಮ್ಸ್ ತಿಳಿಸಿದ ಖಾತೆಗೆ ಜಮೆ ಮಾಡಲಾಗಿದೆ.


ವೀಸಾ ಪಡೆಯುವ ಹಿನ್ನಲೆಯಲ್ಲಿ ಮೇ 26ರಂದು ಐ.ಇ.ಎಲ್.ಟಿ.ಎಸ್ ಪರೀಕ್ಷೆ ಇರುವುದಾಗಿ ತಿಳಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಜೇಮ್ಸ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆ್ ಆಗಿದೆ. ಹಲವು ಬಾರಿ ಪ್ರಯತ್ನಿಸಿದರೂ ಮೊಬೈಲ್ ಸ್ವಿಚ್ ಆ್ ಆಗಿದ್ದು, ಯಾವುದೇ ಉತ್ತರವನ್ನೂ ನೀಡದೆ, ಹಣವನ್ನೂ ವಾಪಾಸು ಮಾಡದೆ ಮೋಸ ಮಾಡಿದ್ದಾನೆ. ಇದೇ ರೀತಿ ಹಲವು ಮಂದಿಗೆ ಮೋಸ ಮಾಡಿರುವ ಮಾಹಿತಿ ಇದೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net