ಪತ್ರಿಕಾ ಭವನ ನಿರ್ಮಾಣಕ್ಕೆ 15 ಲಕ್ಷ ರೂ. ಮಂಜೂರು : ಶಾಸಕ ಸಿದ್ದು ಸವದಿ ಹೇಳಿಕೆ

Mahalingapur
ಮಹಾಲಿಂಗಪುರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮುಧೋಳದ ಎಂ.ಎಚ್. ನದಾಫ, ಲೋಕಾಪುರದ ಹಸನಡ್ರೋಂಗಿ ಮಹಾಲಿಂಗಪುರ, ಜಮಖಂಡಿಯ ಗುರುರಾಜ ವಾಳ್ವೇಕರ, ಮಹಾಲಿಂಗಪುರದ ಜಯರಾಮಶೆಟ್ಟಿ ಅವರಿಗೆ ‘ಪತ್ರಿಕಾ ಮಿತ್ರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕ ಸಿದ್ದು ಸವದಿ, ಆನಂದ ಧಲಬಂಜನ, ಶಂಕರ ಕಲ್ಯಾಣಿ ಇತರರಿದ್ದರು.
Published on

ಮಹಾಲಿಂಗಪುರ : ಪತ್ರಕರ್ತರ ಕಾರ್ಯ ಯೋಧರ ಕಾರ್ಯಕ್ಕೆ ಸಮಾನವಾದುದು ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ಪಟ್ಟಣದ ಟೊಣಪಿನಾಥ ಸಾಂಸ್ಕೃತಿಕ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾಲಿಂಗಪುರದ ಪತ್ರಕರ್ತರ ಬಹುದಿನಗಳ ಬೇಡಿಕೆಯಂತೆ ಪತ್ರಿಕಾಭವನ ನಿರ್ಮಾಣಕ್ಕಾಗಿ 15 ಲಕ್ಷ ರೂ. ಮಂಜೂರು ಮಾಡಲಾಗಿದೆ. ಶೀಘ್ರದಲ್ಲೇ ಭವನ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಬಾಗಲಕೋಟೆ ಜಿಲ್ಲಾ ಕಾನಿಪ ಸಂಘದ ಅಧ್ಯಕ್ಷ ಆನಂದ ಧಲಬಂಜನ, ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಪತ್ರಕರ್ತ ಜಯರಾಮಶೆಟ್ಟಿ, ಡಾ. ಪದ್ಮಜಿತ ನಾಡಗೌಡ ಪಾಟೀಲ ಮಾತನಾಡಿದರು.

ಕಾನಿಪ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಮಹೇಶ ಆರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಡಾ. ಎ.ಆರ್. ಬೆಳಗಲಿ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಜಿಲ್ಲಾ ಕಾನಿಪ ಸಂಘದ ಕಾರ್ಯದರ್ಶಿ ಶಂಕರ ಕಲ್ಯಾಣಿ, ಪುರಸಭೆ ಸದಸ್ಯ ಶೇಖರ ಅಂಗಡಿ, ಗಣ್ಯ ವರ್ತಕ ಚಂದ್ರು ಗೊಂದಿ, ಸ್ಥಳೀಯ ಕಾನಿಪ ಸಂಘದ ಕಾರ್ಯದರ್ಶಿ ಮೀರಾ ತಟಗಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net