ಹುಬ್ಬಳ್ಳಿ: ಹು-ಧಾ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಆ. 23ರಿಂದ ಜಾರಿಗೆ ಬಂದಿರುವ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಂದ ಸೋಮವಾರದವರೆಗೆ 15 ಲಕ್ಷ ರೂ. ದಂಡ ಪಾವತಿಯಾಗಿದೆ.
ಆಯುಕ್ತಾಲಯ ವ್ಯಾಪ್ತಿಯಲ್ಲಿ 2019ರಿಂದ ಇದುವರೆಗೆ ವಾಹಗಳ ಮೇಲೆ 6 ಲಕ್ಷ ಕೇಸ್‌ಗಳಿದ್ದು, ಸುಮಾರು 30 ಕೋಟಿ ರೂ. ದಂಡ ಪಾವತಿಯಾಗಬೇಕಿದೆ. ರಾಜ್ಯ ಸರ್ಕಾರವು ಶೇ. 50ರಷ್ಟು ರಿಯಾಯಿತಿ ಪ್ರಕಟಿಸಿದ್ದರಿಂದ ಆ. 23ರಂದು 2300 ಕೇಸ್‌ಗಳಿದ್ದ ವಾಹನಗಳಿಂದ ಐದೂವರೆ ಲಕ್ಷ ರೂ., 24ರಂದು 1800 ಪ್ರಕರಣಗಳಿದ್ದ ವಾಹನಗಳಿಂದ 4 ಲಕ್ಷ ರೂ., ಸೋಮವಾರದಂದು 2,506 ಕೇಸ್‌ಗಳಿದ್ದ ವಾಹನಗಳಿಂದ 5.56 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ. ಸೆ. 12ರವರೆಗೆ ಶೇ. 50ರ ದಂಡ ಪಾವತಿ ಮುಂದುವರಿಯಲಿದೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸಿ.ಆರ್. ರವೀಶ, ಎಸಿಪಿ ವೀರೇಶ ತಿಳಿಸಿದ್ದಾರೆ.