15 ಕೆ.ಜಿ. ಟೊಮ್ಯಾಟೊ ಬಾಕ್ಸ್​ಗೆ 850 ರೂಪಾಯಿ

sv pura web
Published on

ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿಯಲ್ಲಿ ಸದ್ಯ ಟೊಮ್ಯಾಟೊ ವಹಿವಾಟು ಜೋರಾಗಿದ್ದು, 15 ಕೆಜಿ ತೂಕದ ಟೊಮ್ಯಾಟೊ ಬಾಕ್ಸ್​ ಶನಿವಾರ 850 ರೂಪಾಯಿವರೆಗೆ ಮಾರಾಟವಾಗಿವೆ.
ತಾಲೂಕಿನಲ್ಲಿ ಸುಮಾರು 26 ಸಾವಿರ ಹೆಕ್ಟೇರ್​ ಭೂಮಿಯಲ್ಲಿ ಮಾವು ಬೆಳೆಯಲಾಗಿದ್ದು, ಮಳೆ ಅಭಾವ, ಹವಾಮಾನ ವೈಪರೀತ್ಯದಿಂದ ಮಾವು ಸಲು ಕೈಕೊಟ್ಟಿದ್ದು, ಆದರೆ ಒಂದೆರಡೆಡು ತಿಂಗಳಿಂದ ಟೊಮ್ಯಾಟೊ ಉತ್ತಮ ಬೆಲೆಗೆ ಮಾರಾಟವಾಗುತ್ತಿರುವುದು ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ. ತಾಲೂಕಿನ 700 ಹೆಕ್ಟೇರ್​ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯಲಾಗಿದ್ದರೂ ಬಹುತೇಕ ಬೆಳೆ ನುಶಿ ರೋಗಕ್ಕೆ
ತುತ್ತಾಗಿದೆ. ಇದರಿಂದ ಇಳುವರಿ ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ದುಬಾರಿಯಾಗುತ್ತಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net