

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ವಾಸವಿ ಮಹಲ್ನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನಲ್ಲಿ ಹುಬ್ಬಳ್ಳಿ ಗೋಜು ರಿಯೋ ಕೇನರುಕಾನ ತೋರವಿಗಲ್ಲಿ, ಕೇಶ್ವಾಪುರ ಹಾಗೂ ಆದರಗುಂಚಿ ಶಾಖೆ ಕರಾಟೆ ಪಟುಗಳು ಒಟ್ಟು 15 ಸ್ವರ್ಣ, 9 ಬೆಳ್ಳಿ ಹಾಗೂ 6 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವರ್ಷ ಭೂಮಣ್ಣನವರ ಕುಮಿಟೆ, ಕಾಟಾದಲ್ಲಿ ಪ್ರಥಮ, ತೇಜಸ್ ಯಲಿವಾಲ್ ಕಾಟಾ, ಕುಮಿಟೆಯಲ್ಲಿ ಪ್ರಥಮ, ಮನೀಷ ಪಾಲಿಂ ಕಾಟಾ, ಕುಮಿಟೆಯಲ್ಲಿ ಪ್ರಥಮ, ತನುಶ್ರೀ ಪಾಲಿಂ ಕಾಟಾ, ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸುಪ್ರಿತ ಮಿಸ್ಕಿನ್ ಕಾಟಾ, ಕುಮಿತೆಯಲ್ಲಿ ಪ್ರಥಮ, ಯಶ ವಿರಾಟ್ ಕಾಟಾದಲ್ಲಿ ತೃತೀಯ, ಸಾಚಿ ಗಾವಡೆ ಕಾಟಾದಲ್ಲಿ ದ್ವಿತೀಯ, ಕುಮಿಟೆಯಲ್ಲಿ ಪ್ರಥಮ, ಪ್ರೀತಿ ಶಿಂಗಣ್ಣವರ್ ಕಾಟಾದಲ್ಲಿ ದ್ವಿತೀಯ, ಕುಮಿಟೆಯಲ್ಲಿ ತೃತೀಯ, ಆದಿ ಬೆಣಗಿ ಕಾಟಾದಲ್ಲಿ ತೃತೀಯ, ಹೃಧನ್ ಜೈನ್ ಕಾಟಾದಲ್ಲಿ ಪ್ರಥಮ, ಕುಮಿಟೆಯಲ್ಲಿ ಪ್ರಥಮ, ನಯನ ಪಾಲ್ಗೊತಾ ಕಾಟಾದಲ್ಲಿ ತೃತೀಯ, ರಿಥ್ವಿಕ್ ಲುನಿಯಾ ಕಾಟಾದಲ್ಲಿ ದ್ವಿತೀಯ, ಕುಮಿಟೆಯಲ್ಲಿ ಪ್ರಥಮ, ಆಗ್ಯಾ ಕಾಟಾದಲ್ಲಿ ತೃತೀಯ, ಕುಮಿಟೆಯಲ್ಲಿ ದ್ವಿತೀಯ, ಗ್ರಂಥ ದವೆ ಕಾಟಾದಲ್ಲಿ ಪ್ರಥಮ, ಕುಮಿಟೆಯಲ್ಲಿ ದ್ವಿತೀಯ, ಲೋಹಿತ್ ಗೋವನಕೊಪ್ಪ ಕಾಟಾದಲ್ಲಿ ದ್ವಿತೀಯ, ಧೃತಿ ಲೂನಿಯ ಕಾಟಾ, ಕುಮಿಟೆಯಲ್ಲಿ ಪ್ರಥಮ ಹಾಗೂ ಯುಕ್ತಶ್ರೀ ರೊದ್ದಂ ಕಾಟಾದಲ್ಲಿ ತೃತೀಯ, ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರಿಗೆ ಅಣ್ಣಪ್ಪ ಮರಕಲ್, ವಿನೋದ ಭಾಂಡಗೆ ಹಾಗೂ ಖುಷ್ಬೂ ಜೈನ್ ತರಬೇತಿ ನೀಡಿದ್ದರು.