ಸದಸ್ಯರಿಗೆ ಶೇ.15 ಡಿವಿಡೆಂಟ್ ವಿತರಣೆ

FotoJet 22 4
Published on

ಶಿರಾ:ಶ್ರೀರಂಗನಾಥ ಪತ್ತಿನ ಸಹಕಾರ ಸಂವು ಪ್ರಸಕ್ತ ವರ್ಷ ‘ಬಿ’ ದರ್ಜೆಯ ಸಂವೆಂದು ವರ್ಗೀಕರಿಸಲಾಗಿದೆ. ಪ್ರಸಕ್ತ ವಷರ್ 56 ಲಕ್ಷಕ್ಕೂ ಅಧಿಕ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಟ್ ನೀಡಲಾಗುತ್ತಿದೆ ಎಂದು ಸಂದ ಅಧ್ಯಕ್ಷ ಪ್ರಧಾನ್ ನಾಗರಾಜ್ ತಿಳಿಸಿದರು.

ಶಿರಾ ನಗರದ ರಂಗನಾಥ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಶ್ರೀರಂಗನಾಥ ಪತ್ತಿನ ಸಹಕಾರ ಸಂದ ಸರ್ವ ಸದಸ್ಯರ ಸಭೆಯಲ್ಲಿ ವಾತನಾಡಿ, ಶಿರಾ ತಾಲೂಕಿನಲ್ಲಿ ದೊಡ್ಡ ಆಲದಮರದಲ್ಲಿ ತೆರೆದ ಶಾಖೆಯು ಲಾಭದಾಯಕ ಮತ್ತು ಗ್ರಾಮೀಣ ಭಾಗದ ಜನರಿಗೆ ತ್ವರಿತವಾಗಿ ಸೇವೆ ಸಲ್ಲಿಸುತ್ತಿದೆ. ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಾ ಸವಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಿರ್ದೇಶಕರಾದ ಜಯರಾಮ್, ಬಿ.ಆರ್.ಶ್ರೀನಿವಾಸ್, ದಶರಥ, ಅಶೋಕ್, ಎಂ.ಸಿ.ರಾವೇಂದ್ರ, ನರಸಿಂಹಮೂರ್ತಿ, ಎಸ್.ವಿ.ಅನಿಲ್ ಕುವಾರ್, ನಾಗರಾಜಯ್ಯ, ಚಂದ್ರಕಲಾ, ಕಲ್ಪನಾ, ಟಿ.ಎಲ್.ವನಜಾಕ್ಷಿ, ಕಾರ್ಯದರ್ಶಿ ಕುವಾರ್, ನರಸಿಂಹಯ್ಯ, ವ್ಯವಸ್ಥಾಪಕಿ ಎಸ್.ವಿ.ಜಯಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net