ದೇಶದಲ್ಲಿ 15 ಕೋಟಿ ಮಧುಮೇಹಿಗಳು : ಸಂಸದ ಡಾ.ಸಿ.ಎನ್.ಮಂಜುನಾಥ್ ಕಳವಳ

Dr.C N Manjunath urge
Published on

ಮೈಸೂರು: ದೇಶದಲ್ಲಿ 15 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದು, ಶೇ.12ರಷ್ಟು ಮಕ್ಕಳು ಹಾಗೂ ಯುವಜನರು ಮಧುಮೇಹ ಸಮಸ್ಯೆ ಎದುರಿಸುತ್ತಿದ್ದಾರೆ. ಆರೋಗ್ಯಕರ ಜೀವನಶೈಲಿಯ ಮೂಲಕ ಕಾಯಿಲೆಗಳಿಂದ ದೂರ ಇರಲು ಪ್ರಯತ್ನಿಸಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಸಲಹೆ ನೀಡಿದರು.

ನಗರದ ಮುಕ್ತಗಂಗೋತ್ರಿಂು ಘಟಿಕೋತ್ಸವ ಭವನದಲ್ಲಿ ವಿಶ್ವ ಆಂುುರ್ವೇದ ಪರಿಷತ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಂು, ಶುಶ್ರುತ್ ಆಂುುರ್ವೇದ ವೈದ್ಯಕೀಯ ಕಾಲೇಜು ವತಿಯಿಂದ ಶುಕ್ರವಾರ ಆಂೋಜಿಸಿದ್ದ ‘ಸಂಂೋಜನಂ-2025’ರ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿ, ಮಕ್ಕಳು ಹಾಗೂ ಯುವಜನರು ಮಧುಮೇಹಿಗಳಾಗುತ್ತಿರುವುದು ದೇಶದ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಹಾಗಾಗಿ ಪ್ರತಿಯೊಬ್ಬರು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.

ಇತ್ತೀಚೆಗೆ ಆಹಾರದಲ್ಲಿ ಕಲಬೆರಕೆ ಹೆಚ್ಚಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ದುಷ್ಪಪರಿಣಾಮ ಉಂಟು ಮಾಡುತ್ತಿದೆ. ಇದರ ಜತೆಗೆ ನಿಗದಿತ ಸಮಂುದಲ್ಲಿ ಊಟ ವಾಡದೆ ಇರುವುದರಿಂದ ಹಲವು ರೋಗ-ರುಜಿನಗಳನ್ನು ನಾವೇ ಬರವಾಡಿಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಆರೋಗ್ಯ ಮತ್ತು ನೆಮ್ಮದಿ ಮನುಷ್ಯನ ನಿಜವಾದ ಸಂಪತ್ತು. ಆಂುುರ್ವೇದ ಎಂದರೆ ಆರೋಗ್ಯದಿಂದಿರುವುದು ಎಂದರ್ಥ. ಆಂುುರ್ವೇದದ ಮಹತ್ವವನ್ನು ಜನತೆ ಅರಿಯುತ್ತಿದ್ದು, ವಿವಿಧ ವೈದ್ಯ ಪದ್ಧತಿ ಮೊರೆ ಹೋಗಿ ಕೊನೆಗೆ ಆಂುುರ್ವೇದಕ್ಕೆ ಶರಣಾಗುತ್ತಿದ್ದಾರೆ ಎಂದು ಹೇಳಿದರು.

ನಮ್ಮ ಹಿರಿಂುರು ನಿತ್ಯ ಕರ್ಮದಲ್ಲಿ ಏನು ವಾಡಬೇಕು, ಏನು ವಾಡಬಾರದು ಎಂದು ತಿಳಿದು ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಆರೋಗ್ಯದ ಹಿತದೃಷ್ಟಿಯಿಂದ ಂಾವ ಋತುಗಳಿಗೆ ಏನು ತಿನ್ನಬೇಕು ಎಂದು ತಿಳಿದುಕೊಳ್ಳುತ್ತಿದ್ದರು. ಆಂುುರ್ವೇದದಿಂದ ಆರೋಗ್ಯಕರ ಸವಾಜ ನಿರ್ಮಿಸಬಹುದಾಗಿದೆ ಎಂದು ಅಭಿಪ್ರಾಂುಪಟ್ಟರು.

ಹೈಕೋರ್ಟ್ ವಿಶ್ರಾಂತ ನ್ಯಾಂುಮೂರ್ತಿ ಬಿ.ಕೆ.ಪಾಟೀಲ್, ಪದ್ಮಶ್ರೀ ಪುರಸ್ಕೃತ ಡಾ.ಎಚ್.ಆರ್.ನಾಗೇಂದ್ರ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ವಿಶ್ವ ಆಂುುರ್ವೇದ ಪರಿಷತ್ ರಾಷ್ಟ್ರೀಯ ಕಾಂರ್ುನಿರ್ವಾಹಕ ಸದಸ್ಯ ಡಾ.ಂೋಗೇಶ್‌ಚಂದ್ರ ಮಿಶ್ರಾ, ಬೆಂಗಳೂರಿನ ಎಸ್-ವ್ಯಾಸ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಕೆ.ಮಂಜುನಾಥ, ಅಕಾಡೆಮಿಕ್ ಡೀನ್ ಪ್ರೊ.ಎಂ.ರಾಮನಾಥಂ ನಾಯ್ಡು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net