ದೇವದುರ್ಗದಲ್ಲಿ 15 ಬಾಲಕಾರ್ಮಿಕರ ರಕ್ಷಣೆ

Dvd Child Labour Resucer
ದೇವದುರ್ಗದ ಹೊರವಲಯದಲ್ಲಿ ಕೃಷಿ ಚಟುವಟಿಕೆಗಳಿಗೆ ಗೂಡ್ಸ್ ವಾಹನದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ಮಾಡಿದರು.
Published on

ದೇವದುರ್ಗ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಕೃಷಿ ಚಟುವಟಿಕೆಗೆ ಗೂಡ್ಸ್ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ವೇಳೆ ಅಧಿಕಾರಿಗಳು ದಾಳಿ ನಡೆಸಿ 15 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.

ಸಿರವಾರ ಕ್ರಾಸ್, ಕೊಪ್ಪರ ರಸ್ತೆ, ಗೂಗಲ್ ಮಾರ್ಗದಲ್ಲಿ ಖಾಸಗಿ ಗೂಡ್ಸ್, ಟಂಟಂ, ಬೊಲೆರೋ ವಾಹನಗಳ ಮೇಲೆ ಗುರುವಾರ ದಾಳಿ ನಡೆಸಿದ್ದು, ವಿವಿಧ ಗ್ರಾಮದ ಮಕ್ಕಳನ್ನು ರಕ್ಷಣೆ ಮಾಡಿ ಶಾಲೆಗೆ ದಾಖಲಿಸಲಾಗಿದೆ. ಐದು ವಾಹನಗಳ ಮಾಲೀಕರು ಹಾಗೂ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ವಾಹನ ವಶಕ್ಕೆ ಪಡೆಯಲಾಗಿದೆ.

ಮೂರು ದಿನಗಳ ಹಿಂದೆ 36 ಬಾಲಕಾರ್ಮಿಕರನ್ನು ರಕ್ಷಣೆ ಮಾಡಲಾಗಿತ್ತು. ತಾಲೂಕು ಕಾರ್ಮಿಕ ನಿರೀಕ್ಷಕ ಮಲ್ಲಪ್ಪ, ಸಂಚಾರ ಠಾಣೆ ಪಿಎಸ್‌ಐ ನಾರಾಯಣ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೌಕರರಾದ ತಿಕ್ಕಯ್ಯ, ಹುಸೇನ್ ನಾಯ್ಕ, ಸಾರಿಗೆ ನಿರೀಕ್ಷಕ ಎಂ.ರಾಕೇಶ್, ಇಸಿಒ ರಾಜನಗೌಡ, ವೆಂಕಟೇಶ, ಬಿಆರ್‌ಪಿ ಶಿವಕುಮಾರ ನಾಡಗೌಡ, ವೆಂಕಟಾಚಲಪತಿ, ಸಿಆರ್‌ಪಿ ಸೋಮಶೇಖರ ದೊರೆ, ಪೊಲೀಸ್ ಸಿಬ್ಬಂದಿ ಸಂಗಪ್ಪ, ಮೋಹನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net