

ಹುಬ್ಬಳ್ಳಿ: ಟೈಲ್ಸ್ ಉದ್ಯೋಗದಲ್ಲಿ ಲಾಭ ಗಳಿಸಬಹುದೆಂದು ನಂಬಿಸಿದ ವಂಚಕರು, ನಗರದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 15.90 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ನಗರದ ರಾಮಲಖನ್ ಮಾಲಿ ವಂಚನೆಗೆ ಒಳಗಾದವರು. ತಂಗೋ ಆ್ಯಪ್ ಮೂಲಕ ಪರಿಚಯವಾದ ಮಂಜುರಾಣಿ, ಗುರುದೇವಸಿಂಗ್, ಸಂಗಿತ ರಾಯ್ ಎಂಬುವವರು ವಾಟ್ಸ್ ಆ್ಯಪ್ ಮೂಲಕ ವಿವಿಧ ಮಾಹಿತಿ ನೀಡಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.