ಹುಂಡಿಯಲ್ಲಿ 15.89 ಲಕ್ಷ ಸಂಗ್ರಹ

Oplus_0
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ಸೋಮವಾರ ಹುಂಡಿಯ ಹಣವನ್ನು ಎಣಿಕೆ ಮಾಡಲಾಯಿತು.
Published on

ಯಳಂದೂರು: ತಾಲೂಕಿನ ಪ್ರಸಿದ್ಧ ಗಿರಿಧಾಮವಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿರುವ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುದಲ್ಲಿ ಸೋಮವಾರ ಹುಂಡಿ ಹಣ ಎಣಿಕೆಯಾಗಿದ್ದು, 15,89,508 ರೂ. ಕಾಣಿಕೆ ಸಂಗ್ರಹವಾಗಿದೆ.

ಕಳೆದ 50 ದಿನಗಳಲ್ಲಿ ದೇಗುಲದ ಹುಂಡಿಗಳಲ್ಲಿ ಹಣ ಸಂಗ್ರಹವಾಗಿದೆ. ಇದರಲ್ಲಿ ನೋಟುಗಳ ರೂಪದಲ್ಲಿ 15,04,598 ರೂ. ನಾಣ್ಯಗಳ ರೂಪದಲಿ ್ಲ84,910 ರೂ. ಸಂಗ್ರಹವಾಗಿದೆ ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್, ಸದಸ್ಯರಾದ ಗುಂಬಳ್ಳಿ ರಾಜಣ್ಣ, ವೆಂಕಟರಾಮು, ನಾರಾಯಣಸ್ವಾಮಿ, ಸ್ಫೂರ್ತಿ, ಸಿದ್ದರಾಜು, ಕೇತಮ್ಮ, ಸುರೇಶ್, ತಹಸೀಲ್ದಾರ್ ಎಸ್.ಎಲ್.ನಯನಾ, ಅರ್ಚಕ ರವಿಕುಮಾರ್, ಶ್ರೀನಿವಾಸ, ನಾಗೇಂದ್ರಭಟ್, ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ವೀರಭದ್ರಸ್ವಾಮಿ, ಪಾರುಪತ್ತೇದಾರ ರಾಜು, ಶೇಷಾದ್ರಿ, ದೇಗುಲದ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net