ಕಳೆದ ೨೪ ಗಂಟೆಯಲ್ಲಿ ೧೫.೪೨ ಮಿಮೀ ಮಳೆ

rain
Published on

ಮಡಿಕೇರಿ: ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೧೫.೪೨ ಮಿ.ಮೀ. ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೧೪.೭೮ ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೩.೭೦ ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೧೨.೧೦ ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೩೬.೭೦ ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ಸರಾಸರಿ ಮಳೆ ೯.೮೦ ಮಿ.ಮೀ. ಮಳೆಯಾಗಿದೆ.

ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೧೨.೫೦, ನಾಪೋಕ್ಲು ೯.೬೦, ಸಂಪಾಜೆ ೧೨, ಭಾಗಮಂಡಲ ೨೫, ವಿರಾಜಪೇಟೆ ೫.೪೦, ಅಮ್ಮತ್ತಿ ೨, ಹುದಿಕೇರಿ ೩೩, ಶ್ರೀಮಂಗಲ ೭.೪೦, ಪೊನ್ನಂಪೇಟೆ ೬, ಬಾಳೆಲೆ ೨, ಸೋಮವಾರಪೇಟೆ ೩೯, ಶನಿವಾರಸಂತೆ ೧೫, ಶಾಂತಳ್ಳಿ ೬೪, ಕೊಡ್ಲಿಪೇಟೆ ೨೮.೮೦, ಕುಶಾಲನಗರ ೨.೬೦, ಸುಂಟಿಕೊಪ್ಪ ೧೭ ಮಿ.ಮೀ.ಮಳೆಯಾಗಿದೆ.

ಹಾರಂಗಿ ಜಲಾಶಯದ ಗರಿ? ಮಟ್ಟ ೨,೮೫೯ ಅಡಿಗಳಿದ್ದು, ೨೮೫೨.೬೧ ಅಡಿ ನೀರು ಸಂಗ್ರಹವಾಗಿದೆ. ಇಂದಿನ ನೀರಿನ ಒಳಹರಿವು ೪೮೮೦ ಕ್ಯುಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೪೦೮೩ ಕ್ಯುಸೆಕ್‌ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net