

ಹುಬ್ಬಳ್ಳಿ: ಕೆವೈಸಿ ಅಪಡೇಟ್ ಹೆಸರಿನಲ್ಲಿ ವಾಟ್ಸ್ ಆ್ಯಪ್ ಮೂಲಕ ಎಪಿಕೆ ಪೈಲ್ ಕಳುಹಿಸಿ ನಗರದ ವ್ಯಕ್ತಿಯೊಬ್ಬರಿಂದ 15.29 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ನಗರದ ಪ್ರದೀಪ ಎಸ್. ವಂಚನೆಗೆ ಒಳಗಾದವರು. ವಾಟ್ಸ್ ಆ್ಯಪ್ ಮೂಲಕ ಎಪಿಕೆ ಪೈಲ್ ಕಳುಹಿಸಿದ್ದಾರೆ. ಬ್ಯಾಂಕ್‌ನವರು ಕಳುಹಿಸಿರಬಹದು ಎಂದು ಡೌನಲೋಡ್ ಮಾಡಿಕೊಂಡ ತಕ್ಷಣ 15.29 ಲಕ್ಷ ರೂ. ವಂಚಕರ ಖಾತೆಗೆ ವರ್ಗಾವಣೆಯಾಗಿದೆ ಎಂದು ಪ್ರದೀಪ ಅವರು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.