ಟಿಎಪಿಸಿಎಂಎಸ್‌ಗೆ 15.11 ಲಕ್ಷ ರೂ. ನಿವ್ವಳ ಲಾಭ

25 tth 01 Nagaraj Shetty
(ಕೆ.ನಾಗರಾಜ ಶೆಟ್ಟಿ)
Published on

ತೀರ್ಥಹಳ್ಳಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ 15.11 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ನಾಗರಾಜ ಶೆಟ್ಟಿ ಹೇಳಿದರು.

ಸಂಘದ ಷೇರುದಾರ ಸದಸ್ಯರ ಬೇಡಿಕೆಗೆ ಅನುಗುಣವಾಗಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ವ್ಯವಸಾಯ ಉಪಕರಣ, ಕಾಂಕ್ರೀಟ್ ಸಾಮಗ್ರಿ, ಆಹಾರ ಧಾನ್ಯ ಸೇರಿದಂತೆ ಮುಂತಾದ ಸಾಮಗ್ರಿಗಳ ಮಾರಾಟದಿಂದ 643.46 ಲಕ್ಷ ರೂ. ವಹಿವಾಟು ನಡೆಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಡಿಟ್ ವರ್ಗೀಕರಣದಲ್ಲಿ ಎ ಗ್ರೇಡ್ ಗಳಿಸಿದ್ದು, ಷೇರುದಾರರಿಗೆ ಶೇ.10 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ. ಗಂಟೆಗೆ 20 ಕ್ವಿಂಟಾಲ್ ಹಲ್ಲಿಂಗ್ ಮಾಡುವ ಅತ್ಯಾಧುನಿಕ ಅಕ್ಕಿ ಗಿರಣಿಯಲ್ಲಿ ರಿಯಾಯಿತಿ ದರದಲ್ಲಿ ಭತ್ತದ ಹಲ್ಲಿಂಗ್ ಮಾಡಲಾಗುತ್ತಿದೆ. ಕಳೆದ ಸಾಲಿನಲ್ಲಿ 4 ಸಾವಿರ ಕ್ವಿಂಟಾಲ್ ಭತ್ತ ಹಲ್ಲಿಂಗ್ ಮಾಡಲಾಗಿದ್ದು, 9.76 ಲಕ್ಷ ರೂ. ಲಾಭ ಗಳಿಸಲಾಗಿದೆ. ಎಪಿಎಂಸಿ ಯಾರ್ಡ್‌ನಲ್ಲಿ ಸ್ವಂತ ಗೋದಾಮು ಹೊಂದಿದ್ದು ಅಡಕೆ ಕಮಿಷನ್ ವ್ಯವಹಾರದಲ್ಲಿ 11.72 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಬ್ಯಾಂಕಿನ ನಿರ್ದೇಶಕ ಎಚ್.ಎನ್.ವಿಜಯದೇವ್, ಸಂಘದ ಉಪಾಧ್ಯಕ್ಷ ಗಿರಿಯಪ್ಪ ಗೌಡ, ನಿರ್ದೇಶಕರಾದ ಕಡಿದಾಳು ತಾರಾನಾಥ್, ರಾಜಕಮಲ್, ಕಾರ್ಯದರ್ಶಿ ಎಚ್.ಜಿ.ರಚನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net