14ರಿಂದ ದುರ್ಗದಲ್ಲಿ ಸಹ ಯೋಗ ಶಿಕ್ಷಕರ ತರಬೇತಿ ಶಿಬಿರ

DSCN9551--0005
Published on

ಚಿತ್ರದುರ್ಗ: ಕರ್ನಾಟಕ ಪತಂಜಲಿ ಯೋಗ ಸಮಿತಿ ರಾಜ್ಯದ 31 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಸಹ ಯೋಗ ಶಿಕ್ಷಕರ ತರಬೇತಿ ಶಿಬಿರ ಪ್ರಾರಂಭಿಸಿದೆ ಎಂದು ಪತಂಜಲಿಯೋಗ ಪೀಠದ ಕರ್ನಾಟಕ ಪ್ರಭಾರಿ ಭವರ್‌ಲಾಲ್ ಆರ್ಯ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂತಾರಾಷ್ಟ್ರೀಯ 10ನೇ ಯೋಗ ದಿನಾಚರಣೆಯಿಂದ ರಾಜ್ಯದಲ್ಲಿ ಯೋಗಮಯ ಕರ್ನಾಟಕ ಅಭಿಯಾನ ಆರಂಭವಾಗಿದೆ. ಈ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಜು.14 ರಿಂದ 25 ದಿನಗಳ ಕಾಲ ನಗರದ ಸ್ವಾತಂತ್ರ್ಯಹೋರಾಟಗಾರರ ಸ್ಮಾರಕ ಭವನ ‘ವೀರಸೌಧ’ ದಲ್ಲಿ ಸಹಯೋಗ ಶಿಕ್ಷಕರ ತರಬೇತಿ ಶಿಬಿರ ಪ್ರಾರಂಭವಾಗಲಿದೆ ಎಂದರು.
ಆಸಕ್ತರು ಶ್ರೀ ದೇವಾನಂದ ನಾಯಕ್(9880619381), ಶ್ರೀನಿವಾಸ್ ಅವರನ್ನು(9448952326) ಸಂಪರ್ಕಿಸಬಹುದು ಎಂದರು. ಯೋಗ ಶಿಕ್ಷಕರಾಗಲು ವಯಸ್ಸಿನ ಇತಿಮಿತಿ ಇಲ್ಲ. ಕನಿಷ್ಠ 18 ವರ್ಷ ಮೇಲ್ಪಟ್ಟ ಎಲ್ಲರೂ ಅರ್ಹರಾಗಿದ್ದಾರೆ. ಬೆಳಗ್ಗೆ ಐದರಿಂದ 2 ಗಂಟೆಗಳ ಕಾಲ ಸಮಯ ಕೊಡುವವರು, ಅವರ ಆರೋಗ್ಯದ ಜತೆ ಸುತ್ತಮುತ್ತಲಿನವರ ಆರೋಗ್ಯ ರಕ್ಷಣೆ ಮನಸ್ಥಿತಿ ಇರುವವರು ತರಬೇತಿಯಲ್ಲಿ ಭಾಗವಹಿಸಬಹುದು ಎಂದರು.
ಚಿತ್ರದುರ್ಗದ ಎಲ್ಲ ವಾರ್ಡ್‌ಗಳಲ್ಲೂ ಉಚಿತ ಯೋಗ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಜಿಲ್ಲಾ, ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಉಚಿತ ಯೋಗ ಶಿಬಿರ, ಯೋಗ ಕೇಂದ್ರಗಳನ್ನು ಪ್ರಾರಂಭಿಸುವುದು ಯೋಗಮಯ ಕರ್ನಾಟಕ ಅಭಿಯಾನದ ಉದ್ದೇಶವಾಗಿದೆ ಎಂದರು.
ಆಹಾರ ಪದ್ಧತಿ ಹೇಗಿರಬೇಕು? ಯಾವ ಸಮಯದಲ್ಲಿ ಆಹಾರ ಸೇವಿಸಬೇಕು? ಇತ್ಯಾದಿ ಆರೋಗ್ಯಕರ ಜೀವನ ಶೈಲಿ ಕುರಿತು ತರಬೇತಿಯಲ್ಲಿ ತಿಳಿಸಲಾಗುವುದು. ಕಾಯಿಲೆಗಳಿಗೆ ಬಡವ, ಶ್ರೀಮಂತ ಎಂಬ ಭೇದವಿಲ್ಲ. ಯೋಗದಿಂದ ಆರೋಗ್ಯವಂತರಾಗಿ ಬದುಕು ನಡೆಸಬಹುದು.
ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದೇನೆ. 30 ಲಕ್ಷಕ್ಕಿಂತ ಹೆಚ್ಚು ನಾಗರಿಕರಿಗೆ ಪ್ರತ್ಯಕ್ಷವಾಗಿ ಯೋಗ ತರಬೇತಿ ನೀಡಿದ್ದೇನೆ ಎಂದರು. ನವೀನ್, ಕಲ್ಲೇಶ್, ಗುರುಮೂರ್ತಿ, ದೇವಾನಂದ ನಾಯಕ, ಶ್ರೀನಿವಾಸ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net