

ಚಿತ್ರದುರ್ಗ:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ,ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಶಾಖೆ ಮತ್ತು ರೋಟರಿ ಕ್ಲಬ್, ಚಿನ್ಮೂ ಲಾದ್ರಿಯಿಂದ ನಗರದ ರೋಟರಿ ಬಾಲಭವನದಲ್ಲಿ ನ.14ಂದು ಬೆಳಗ್ಗೆ 10.30ಕ್ಕೆ ಮತದಾನದ ಜಾಗೃತಿಗಾಗಿ ಕವಿಗೋಷ್ಠಿ ಏರ್ಪಡಿಸಲಾಗಿದೆ.
ಯಾವುದೇ ಪಕ್ಷ,ವ್ಯಕ್ತಿ ಪರ ಮತ್ತು ವಿರೋಧದ ಕವನಗಳಿಗೆ ಅವಕಾಶವಿಲ್ಲ. ಗೋಷ್ಠಿಯಲ್ಲಿ ಭಾಗವಹಿಸುವವರಿಗೆ ಸ್ವೀಪ್ ಸಮಿತಿ ಮತ್ತು ಸಾಹಿತ್ಯ ಪರಿಷತ್‌ನಿಂದ ಪ್ರಶಂಸನಾ ಪತ್ರ ನೀಡಲಾಗುವುದು. ಏ.10ರೊಳಗೆ ವಾಟ್ಸ್‌ಪ್ ಮೂಲಕ ಕವನಗಳನ್ನು ಕಳುಹಿಸಬೇಕು. ಆಯ್ಕೆ ಸಮಿತಿ ತೀರ್ಮಾ ನವೇ ಅಂತಿಮ. ಕೆ.ಎಂ.ಶಿವಸ್ವಾಮಿ(9449510078)ಶ್ರೀನಿವಾಸ ಮಳಲಿ(9449759219)ಹಾಗೂ ವಿ.ಧನಂಜಯ(9538418943)ಇವರಿಗೆ ಕವನಗಳನ್ನು ಕಳುಹಿಸಬಹುದೆಂದು ಪರಿಷತ್ ಪ್ರಕಟಣೆ ತಿಳಿಸಿದೆ.