14ರಂದು ಭಗೀರಥ, ಶಂಕರಾಚಾರ್ಯರ ಜಯಂತಿ

IMG-20240508-WA0105
ಸಾಲಿಗ್ರಾಮ ತಾಲೂಕು ಆಡಳಿತದಿಂದ ಮಹರ್ಷಿ ಭಗೀರಥ ಜಯಂತಿ ಮತ್ತು ಶಂಕರಾಚಾರ್ಯ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಯಿತು. ಎಸ್.ಎನ್.ನರಗುಂದ, ಸತೀಶ್‌ಕುಮಾರ್, ಶಿವಕುಮಾರ್ ಇತರರು ಇದ್ದರು.
Published on

ಸಾಲಿಗ್ರಾಮ: ತಾಲೂಕು ಆಡಳಿತದ ವತಿಯಿಂದ ಮೇ 14ರಂದು ಅರ್ಥಪೂರ್ಣವಾಗಿ ಮಹರ್ಷಿ ಶ್ರೀ ಭಗೀರಥ ಹಾಗೂ ಶ್ರೀ ಶಂಕರಾಚಾರ್ಯರ ಜಯಂತಿ ಆಚರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ಎಸ್.ಎನ್.ನರಗುಂದ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಸರ್ವರೂ ಸೇರಿ ಆಚರಿಸುವ ಮೂಲಕ ಗೌರವ ಸಲ್ಲಿಸಬೇಕು. ಚುನಾವಣೆ ನೀತಿ ಸಂಹಿತೆ ಇರುವ ಕಾರಣ ತಾಲೂಕು ಕಚೇರಿಯಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗುವುದು. ಶ್ರೀ ಭಗೀರಥ ಮಹರ್ಷಿ ಹಾಗೂ ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ಸಭೆಯಲ್ಲಿ ಉಪ ತಹಸೀಲ್ದಾರ್ ಸತೀಶ್‌ಕುಮಾರ್, ಶಿರಸ್ತೇದಾರ್ ಶಿವಕುಮಾರ್, ರಾಜ್ಯ ಉಪ್ಪಾರ ಯುವ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಕೆ.ಟಿ.ಮೋಹನ್‌ಕುಮಾರ್, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಕಟ್ನಾಳು ಮಹದೇವ್, ಉಪಾಧ್ಯಕ್ಷ ನಾಡಪ್ಪನಹಳ್ಳಿ ರಾಮಕೃಷ್ಣ, ಸಾಲಿಗ್ರಾಮ ಪಟ್ಟಣದ ಉಪ್ಪಾರ ಸಂಘದ ಅಧ್ಯಕ್ಷ ಗವೀಗೌಡ, ಉಪಾಧ್ಯಕ್ಷ ಸುರೇಶ, ಹರದನಹಳ್ಳಿ ಶ್ರೀ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ರಾಜೇಶ್, ಮಾಜಿ ಅಧ್ಯಕ್ಷ ದೇವೇಗೌಡ, ಮುಖಂಡರಾದ ಭೇರ್ಯ ಬೇಟಪ್ಪ, ಸಾಲಿಗ್ರಾಮ ಎಸ್.ಎಸ್.ರಮೇಶ್, ಮುದುಗುಪ್ಪೆ ಎಂ.ಜೆ.ಕುಮಾರ, ಹರದನಹಳ್ಳಿ ರಾಮು, ಕುಪ್ಪಳ್ಳಿ ಗೋವಿಂದೇಗೌಡ, ಚಿಕ್ಕಹನಸೋಗೆ ಮಂಜುನಾಥ್, ಶಂಕರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net