ಸರ್ವ ಸಮುದಾಯಗಳ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ

SDM 1
Published on

ಸೇಡಂ: ಭಾರತೀಯ ಜನತಾ ಪಕ್ಷ ಸರ್ವ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂಬರುವ ದಿನಗಳಲ್ಲಿ ದೇಶದ ಒಳಿತಿಗಾಗಿ ಮತ್ತೊಮ್ಮೆ ಬಿಜೆಪಿ ಬೆಂಬಲಿಸುವುದು ಅಗತ್ಯವಾಗಿದೆ ಎಂದು ಕಲ್ಯಾಣ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.

ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬುಧುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ವಿವಿಧ ಪಕ್ಷಗಳ ಗ್ರಾಪಂ ಸದಸ್ಯರು ಹಾಗೂ ಕಾರ್ಯಕರ್ತರನ್ನು ಬಿಜೆಪಿಗೆ ಸ್ವಾಗತಿಸಿ ಮಾತನಾಡಿ, ಮೇಲು-ಕೀಳುಗಳಿಲ್ಲ, ಬಡವ-ಸಿರಿವಂತನೆಬ್ಬ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮನಾಗಿ ಕಾಣುವ ಏಕೈಕ ಪಕ್ಷ ಬಿಜೆಪಿ. ಸನಾತನ ಧರ್ಮಕ್ಕೆ ಯುಗಾದಿ ಹೊಸ ವರ್ಷ, ಇಂತಹ ಶುಭ ದಿನದಂದು ಅಸಂಖ್ಯಾತ ಕಾರ್ಯಕರ್ತರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಮುಖಂಡರಾದ ಜಾನ್ ಹೊಸಳ್ಳಿಕರ್, ಮಲ್ಲಣ್ಣ ಮಂತಟ್ಟಿ, ರಾಜಶೇಖರ ಮುಗಳಿ, ಓಂಪ್ರಕಾಶ ಮುಗುಳಿ, ಶಂಕರ ಡೊಳ್ಳಾ, ಭೀಮರಾವ ಪಾಟೀಲ್, ದೇವಪ್ಪ ನಾಯಿಕೋಡಿ, ಮಾರುತಿ ಸರಡಿಗಿ ಸೇರಿ ಕುರಕುಂಟಾ, ಬಟಗೇರಾ, ನೀಲಹಳ್ಳಿ, ಹೊಸಳ್ಳಿ ಗ್ರಾಮದ ಹಲವು ಕಾರ್ಯರ್ತರು ಬಿಜೆಪಿ ಸೇರ್ಪಡೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net