ಭದ್ರಾವತಿ: ಶ್ರೀ ಚಂಡೇಶ್ವರಿ ಜಾತ್ರೆಗೆ ಚಾಲನೆ

WEB BDVTTT
Published on

ಭದ್ರಾವತಿ: ನಗರದ ಹುಡ್ಕೋ ಕಾಲನಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಕ್ಷೇತ್ರ ದೇವತೆ ಶ್ರೀ ಚಂಡೇಶ್ವರಿ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಮೊದಲ ದಿನವಾದ ಭಾನುವಾರ ದೇವಿಗೆ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು. ಹೋಮ, ಹವನಗಳು ಜರುಗಿದವು. ಮಹಾಮಂಗಳಾರತಿ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶಾಸಕ ಬಿ.ಕೆ.ಸಂಗಮೇಶ್ವರ್, ಶಾರದಾ ಅಪ್ಪಾಜಿ, ನಗರಸಭೆ ಸದಸ್ಯರಾದ ಉದಯಕುಮಾರ್, ಆನೇಕೊಪ್ಪ ಬಸವರಾಜ್ ಸೇರಿದಂತೆ ಹಲವು ಪ್ರಮುಖರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುತ್ತಮುತ್ತಲ ವಾರ್ಡ್‌ನ ನೂರಾರು ಮಹಿಳೆಯರು, ಮಕ್ಕಳು ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net