ಅಂತರಘಟ್ಟೆ ದುರ್ಗಾಂಬಾ ದೇವಿ ರಥೋತ್ಸವ

4ajp13 web
Published on

 ಅಜ್ಜಂಪುರ: ಅಂತರಘಟ್ಟೆ ಶ್ರೀ ದುರ್ಗಾಂಬಾ ದೇವಿ ಮಹಾರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು. ದುರ್ಗಾಂಬಾ ದೇವಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಸಲಾಯಿತು.  ವೈವಿಧ್ಯಮಯ ಹೂವು, ಬಣ್ಣದ ಬಟ್ಟೆಗಳಿಂದ ಸಿಂಗರಿಸಿದ್ದ ರಥದಲ್ಲಿ ದೇವಿಯನ್ನು ಕೂರಿಸಿ ಬೆಳಗ್ಗೆ 7 ಗಂಟೆಗೆ ಭಕ್ತರು ರಥ ಎಳೆದು ಜಯಘೊಷ ಕೂಗಿ ಸಂಭ್ರಮಿಸಿದರು. ನಂತರ ಭಕ್ತರು ಕಳಸಕ್ಕೆ ಬಾಳೆಹಣ್ಣು ಎಸೆದು ರಥದ ಚಕ್ರಕ್ಕೆ ತೆಂಗಿನ ಕಾಯಿ ಒಡೆದು ಪಾನಕ, ಫಲಾಹಾರ ಹಂಚಿ ಹರಕೆ ತೀರಿಸಿದರು.

ಜಾತ್ರಾ ಮಹೋತ್ಸದಲ್ಲಿ ದೇವಿಗೆ ಬೇವಿನ ಸೀರೆ ಉತ್ಸವ, ಉಯ್ಯಾಲೋತ್ಸವ, ನವಿಲೋತ್ಸವ, ಕುಂಕುಮ ಪೂಜೆ ಸೇರಿದಂತೆ ಹಲವು ಧಾರ್ವಿುಕ ವಿಧಿಗಳು ಜರುಗಿದವು. ಎಂಟು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಮತ್ತಿತರ ಜಿಲ್ಲೆಗಳಿಂದ ಬಸ್​ಗಳಲ್ಲದೇ ನೂರಾರು ಎತ್ತಿನ ಬಂಡಿ, ನೂರಾರು ಟ್ರ್ಯಾಕ್ಟರ್, ಟ್ರಕ್, ಆಟೋಗಳಲ್ಲಿ ಸಾವಿರಾರು ಜನ ಜಾತ್ರೆಗೆ ಆಗಮಿಸಿದ್ದರು. ಭಕ್ತರು ಕಮಾನು ಕಟ್ಟಿದ ಗಾಡಿಗಳಲ್ಲಿ ಕುಟುಂಬಸಮೇತರಾಗಿ ಆಗಮಿಸಿ 2-3 ದಿನಗಳ ಕಾಲ ಉಳಿದು ರಥೋತ್ಸವದಲ್ಲಿ ಪಾಲ್ಗೊಂಡರು. ಭಕ್ತರಿಗೆ ಅನ್ನದಾಸೋಹ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net