ಮನೆಮತದಾನದ ಮೂಲಕ ಹಕ್ಕು ಚಲಾಯಿಸಿದ 143 ಜನ

HUN-APR-16-8(HOME VOTING)
Published on

ಹುಣಸೂರು: ಹುಣಸೂರು ತಾಲೂಕಿನಲ್ಲಿ 143 ಜನ ಮನೆ ಮತದಾನದ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆಂದು ಸಹಾಯಕ ಚುನಾವಣಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ತಿಳಿಸಿದರು.


ಚುನಾವಣಾ ಆಯೋಗದ ನಿರ್ದೇಶನದಂತೆ ಏ.15 ಮತ್ತು 16ರಂದು ತಾಲೂಕಿನಲ್ಲಿ ಗುರುತಿಸಲ್ಪಟ್ಟ 93 ಮತಗಟ್ಟೆಗಳಲ್ಲಿನ ಒಟ್ಟು 149 ಜನ 85 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲರು ಮತದಾನಮಾಡಿದ್ದಾರೆ. ಇದಕ್ಕೆ 21 ಸೆಕ್ಟರ್ ಅಧಿಕಾರಿಗಳು, 9 ರೂಟ್ ಆಫೀಸರ್ಸ್‌ಗಳನ್ನು ನೇಮಿಸಲಾಗಿತ್ತು. 149 ಮತಗಳ ಪೈಕಿ 141ಜನ ಮೊದಲ ದಿನ ಹಾಗೂ ಇಬ್ಬರು ಮತದಾರರು ಎರಡನೇ ದಿನ ಅಂಚೆ ಮತಪತ್ರದ ಮೂಲಕ ತಮ್ಮ ಮತ ಚಲಾಯಿಸಿದ್ದಾರೆ. ಮಿಕ್ಕ 6 ಮತದಾರರ ಪೈಕಿ ಐವರು ಮರಣಹೊಂದಿದ್ದು, ಮತ್ತೊಬ್ಬರು ಎರಡನೇ ದಿನವೂ ಮನೆಯಲ್ಲಿ ಇರದ ಕಾರಣ ಮತದಾನದ ಪ್ರಕ್ರಿಯೆಯನ್ನು

ಸಂಪನ್ನಗೊಳಿಸಲಾಗಿದೆ. ಮನೆ ಮತದಾನ ಪ್ರಕ್ರಿಯೆ ಕುರಿತು ಚುನಾವಣಾ ಆಯೋಗಕ್ಕೆ ಮಾಹಿತಿ ರವಾನಿಸಲಾಗಿದೆ ಎಂದು ಅವರು ವಿಜಯವಾಣಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net