

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕರೊನಾ ಎರಡನೇ ಅಲೆ ಪ್ರಬಲವಾಗತೊಡಗಿದ್ದು, ಮೊದಲ ಬಾರಿಗೆ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದ್ದು, ಜನವಲಯದಲ್ಲಿ ಭೀತಿ ಹುಟ್ಟಿಸಿದೆ. ಸೋಮವಾರ 142 ಮಂದಿಯಲ್ಲಿ ಕರೊನಾ ಸೋಂಕಿರುವುದು ಪತ್ತೆಯಾಗಿದ್ದು 40 ಮಂದಿ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಪತ್ತೆಯಾದ ಸೋಂಕಿತರಲ್ಲಿ ಹೋಂ ಐಸೊಲೇಶನ್‍ನಲ್ಲಿ 130, ಡಿಸಿಎಸ್‍ಸಿ ಹಾಗೂ ಖಾಸಗಿ ಅಸ್ಪತ್ರೆಯಲ್ಲಿ ತಲಾ ಆರು ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 641 ಸಕ್ರಿಯ ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ.