ದಾನಿಗಳಿಂದ 141 ಯೂನಿಟ್ ರಕ್ತ ಸಂಗ್ರಹ

SRP_16-01jpj
ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಸಮೀಪದ ಎಂಆರ್‌ಐಟಿ ಕಾಲೇಜಿನಲ್ಲಿ ಗುರುವಾರ ರೆಡ್‌ಕ್ರಾಸ್ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಶಿಬಿರದಲ್ಲಿ 141 ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.
Published on

ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಸಮೀಪದ ಮೈಸೂರು ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಶಿಬಿರದಲ್ಲಿ ದಾನಿಗಳಿಂದ 141 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಪ್ರಯೋಗಾಲಯ ತಂತ್ರಜ್ಞೆ ಭಾನುಮತಿ ಸಹಕಾರದೊಂದಿಗೆ ಮಂಡ್ಯದ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಎಂಆರ್‌ಐಟಿ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಶಿಬಿರದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಗಮನ ಸೆಳೆದಿದ್ದು, ಮಿಮ್ಸ್‌ನ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಮೊಹಮದ್ ರಫಿ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಹೇಮಣ್ಣ ನೇತೃತ್ವದಲ್ಲಿ ಸಿಬ್ಬಂದಿ ಸುರಕ್ಷಿತವಾಗಿ ದಾನಿಗಳಿಂದ ರಕ್ತ ಸಂಗ್ರಹಿಸಿದರು.

ಎಂಆರ್‌ಐಟಿ ಸಂಸ್ಥೆಯ ಕಾರ್ಯದರ್ಶಿ ನಂದಿನಿ ನರಸಿಂಹಮೂರ್ತಿ ಶಿಬಿರ ಪ್ರಾರಂಭಕ್ಕೂ ಮೊದಲು ಚಾಲನೆ ನೀಡಿ ಮಾತನಾಡಿ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಅತ್ಯಂತ ಮುಖ್ಯವಾಗಿದ್ದು, ಜೀವಗಳ ಹಾನಿಯನ್ನು ತಪ್ಪಿಸಲು ಇಂತಹ ರಕ್ತದಾನ ಶಿಬಿರ ಪರಿಣಾಮಕಾರಿಯಾಗಿ ನೆರವಾಗಲಿದೆ. ರಕ್ತದಾನ ಮಾಡಿದ ವ್ಯಕ್ತಿಯ ಆರೋಗ್ಯವು ಹೊಸ ರಕ್ತದ ವೃದ್ಧಿಯಿಂದ ಇನ್ನಷ್ಟು ಚೈತನ್ಯಗೊಳ್ಳಲಿದ್ದು, ರಕ್ತ ಪಡೆದ ಮತ್ತೊಂದು ಜೀವ ಉಳಿಯಲಿದೆ. ದಾನಿಗಳಿಂದ ಅಗತ್ಯವಾಗಿ ಪಡೆದ ರಕ್ತವನ್ನು ವಿವಿಧ ವೈದ್ಯಕೀಯ ಪರೀಕ್ಷೆಗಳಿಗೊಳಪಡಿಸಿ ಎಲ್ಲಾ ರೀತಿಯ ಸುರಕ್ಷತ ಕ್ರಮಗಳ ಮೂಲಕ ರಕ್ತನಿಧಿ ಕೇಂದ್ರಗಳಲ್ಲಿ ಸಂಗ್ರಹಿಸಿ ಸಾಮಾಜಿಕ ಕಾಳಜಿ ಹಾಗೂ ಜನರ ಆರೋಗ್ಯ ಸುರಕ್ಷತೆಗೆ ಬಳಸಿ ಎಂದರು.

ಸಂಸ್ಥೆ ಖಜಾಂಚಿ ಡಾ.ರಾಮಲಿಂಗಯ್ಯ, ಪ್ರಾಂಶುಪಾಲ ಡಾ.ಅಭಿನಂದನ್, ಉಪಪ್ರಾಂಶುಪಾಲ ಡಾ.ನಕುಲ್, ಎನ್‌ಎಸ್‌ಎಸ್ ಅಧಿಕಾರಿ ಡಾ.ರವಿಕುಮಾರ್,ಪ್ರೊ.ಮುತ್ತುರಾಜು, ಗ್ರಂಥಪಾಲಕ ರಾಘು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net