ಕೊಳ್ಳೇಗಾಲ ಪಟ್ಟಣದ ಮೂರು ಕೆರೆಗಳ ಅಬಿವೃದ್ದಿಗೆ 10 ಕೋಟಿ ರೂ.

1670073655146
Published on

ಚಾಮರಾಜನಗರ: ಕೊಳ್ಳೇಗಾಲದ ಮುಕುಟ ಪ್ರಾಯವೆನಿಸಿರುವ ಚಿಕ್ಕರಂಗನಾಥ ಕೆರೆ, ಕೊಂಗಳ ಕೆರೆ ಮತ್ತು ಮುಡಿಗುಂಡ ಕೆರೆ ಅಭಿವೃದ್ದಿಗಾಗಿ ಮುಖ್ಯಮಂತ್ರಿಯವರ ವಿಶೇ? ಅನುದಾನದಡಿ 10 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಮೂರು ಕೆರೆಗಳ ಅಭಿವೃದ್ದಿಯನ್ನು ಉತ್ತಮವಾಗಿ ನಿರ್ವಹಿಸಿ ನಗರದ ಆಕ?ರ್ಣೀಯ ಕೇಂದ್ರಗಳನ್ನಾಗಿಸಬೇಕು ಎಂದು ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ತಿಳಿಸಿದರು.

ಕೊಳ್ಳೇಗಾಲದ ಚಿಕ್ಕರಂಗನಾಥ ಕೆರೆ ಬಳಿ ಮೂರು ಕೆರೆಗಳ ಅಭಿವೃದ್ದಿ ಕಾಮಗಾರಿಗೆ ಸಾಂಕೇತಿಕವಾಗಿ ಭೂಮಿ ಪೂಜೆ ಸಲ್ಲಿಸುವ ಮೂಲಕ ಕಾಮಗಾರಿಗೆ ಅವರು ಚಾಲನೆ ನೀಡಿದರು. ಮುಖ್ಯಮಂತ್ರಿಯವರು ಇದೇ ಡಿಸೆಂಬರ್ 12ರಂದು ಹನೂರಿನಲ್ಲಿ ಒಟ್ಟಾಗಿ ಅಭಿವೃದ್ದಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ಅಧಿಕೃತವಾಗಿ ಈ  ಎಲ್ಲಾ ಮೂರಿ ಕೆರೆಗಳ ಅಭಿವೃದ್ದಿಗೆ ಚಾಲನೆ ನೀಡಲಿದ್ದಾರೆ. ಇಂದು ಸಾಂಕೇತಿಕವಾಗಿ ಪೂಜೆ ನೆರವೇರಿಸಲಾಗಿದೆ. ಅತ್ಯಂತ ಪೂರ್ವ ಕಾಲದ ಕೆರೆಗಳನ್ನ ಸಂರಕ್ಷಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ವಿಶೇ? ಅನುದಾನದಡಿ 10 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ ಎಂದರು.

ಜನರಿಗೆ ಅನುಕೂಲವಾಗಲೆಂದು ನಿರ್ಮಿಸಲಾದ ಕೆರೆಗಳಿಂದ ಉತ್ತಮ, ನೈರ್ಮಲ್ಯ, ಗಾಳಿ ಬರಲಿ ಎಂಬುದು ಆಶಯವಾಗಿತ್ತು. ಆದರೆ ಇಂದು ಕಲುಷಿತ ನೀರು ಕೆರೆಗಳಿಗೆ ಸೇರಿ ದುರ್ವಾಸನೆ ಬೀರುತ್ತಿದೆ. ಇದನ್ನು ತಪ್ಪಿಸಿ ನೈರ್ಮಲ್ಯವನ್ನೇ ಉಳಿಸಿ ಉತ್ತಮವಾಗಿ ಪೋ?ಣೆ ಮಾಡುವ ಉದ್ದೇಶದಿಂದ ಕೆರೆಗಳ ಅಭಿವೃದ್ದಿಗೆ ಅನುದಾನ ನೀಡಲಾಗಿದೆ ಎಂದರು.

ಕೆರೆಗಳನ್ನ ಸರ್ವೆ ಮಾಡಿಸಬೇಕು. ಕಲುಷಿತ ನೀರು ಸೇರದಂತೆ ನೋಡಿಕೊಳ್ಳಬೇಕು. ಕಲುಷಿತ ನೀರನ್ನು ಹೊರ ಬಿಟ್ಟು ಮತ್ತೆ ಹೊಸದಾಗಿ ನೀರು ತುಂಬಿಸಬೇಕು. ಇನ್ನೂ ಹಣ ಹೆಚ್ಚಾದರೂ ಪರವಾಗಿಲ್ಲ, ಕೆರೆಗಳು ಅಚ್ಚುಕಟಾಗಿ ಅಬಿವೃದ್ದಿಯಾಗಬೇಕು. ಪ್ರಕೃತಿ ಸಂಪತ್ತನ್ನು ಉಳಿಸಿಕೊಂಡು ಜನರ ಆಕ?ರ್ಣೀಯ ಕೇಂದ್ರಗಳನ್ನಾಗಿಸಬೇಕೆಂದು ಸಚಿವರು ತಿಳಿಸಿದರು.

ಇಂದು ಕೊಳ್ಳೇಗಾಲ ಪಟ್ಟಣದ ಮುರುಳೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿಯೂ ಮುಖ್ಯಮಂತ್ರಿಗಳ ವಿಶೇ? ಅನುದಾನದಡಿ 1.5 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿಗೆ ಪೂಜೆ ನೆರವೇರಿಸಲಾಗಿದೆ. ಒಟ್ಟಾರೆ ವೇಗವಾಗಿ ಬೆಳೆಯುತ್ತಿರುವ ಕೊಳ್ಳೇಗಾಲ ಪಟ್ಟಣದ ಬೆಳವಣಿಗೆಗೆ ಪೂರಕವಾಗಿ ಎಲ್ಲಾ ನೆರವುಗಳನ್ನು ನೀಡಲಾಗುತ್ತದೆ. ಈ ಅವಿಸ್ಮರಣೀಯ ಒಳ್ಳೆಯ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಬೇಕೆಂದು ಸಚಿವರು ತಿಳಿಸಿದರು. ಇಲ್ಲಿನ ಜಗಜೀವನ್ ರಾಮ್ ಭವನ ನಿರ್ಮಾಣಕ್ಕೂ 12ಲಕ್ಷ ರೂ. ಕೊಟ್ಟಿದ್ದೇವೆ. ಈ ಭವನದ ನಿರ್ಮಾಣ ಕಾರ್ಯವು ಸಹ ತ್ವರಿತವಾಗಿ ಹಮ್ಮಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.

ಶಾಸಕ ಎನ್. ಮಹೇಶ್ಮಾತನಾಡಿ ಕೆರೆಗಳ ಪುನರುಜ್ಜೀವನಕ್ಕೆ 10 ಕೋಟಿ ರೂ. ಹಾಗೂ ಮುರುಳೇಶ್ವರ ದೇವಾಲಯ ಜೀರ್ಣೋದ್ದಾರಕ್ಕೆ 1.5 ಕೋಟಿ ರೂ. ಬಿಡುಗಡೆಯಾಗಿದ್ದು, ಇದಕ್ಕಾಗಿ ಮುಖ್ಯಮಂತ್ರಿಯವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಾವು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಚಿಕ್ಕರಂಗನಾಥ ಕೆರೆ ವಿಸ್ತಾರವಾಗಿದ್ದು ಇಲ್ಲಿ ವಾಕಿಂಗ್ ಪಾರ್ಕ್, ಆಟದ ಮೈದಾನ, ದ್ವೀಪ ಮಾದರಿಯಾಗಿಸುವುದರಿಂದ ಜನರ ಆಕ?ರ್ಣೀಯ ತಾಣಗಳಲ್ಲಿ ಒಂದಾಗಿಸಬಹುದು. ಪ್ರವಾಸಿ ಕೇಂದ್ರವನ್ನಾಗಿಯೂ ಅಭಿವೃದ್ದಿಯಾಗಲಿದೆ ಎಂದರು.

ನಗರಸಭೆ ಅಧ್ಯಕ್ಷಾರ ರೇಖಾ, ಉಪಾಧ್ಯಕ್ಷರಾದ ಸುಶೀಲ, ಸದಸ್ಯರಾದ ನಾಸಿರ್ ?ರೀಫ್, ನಾಗಸುಂದ್ರಮ್ಮ, ಪವಿತ್ರ, ಮಾನಸ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಂಕರನಾರಾಯಣ ಗುಪ್ತ, ನಾಮ ನಿರ್ದೇಶಿತ ಸದಸ್ಯರಾದ ಸೋಮಣ್ಣ, ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್ ಮಂಜುಳಾ, ಪೌರಾಯುಕ್ತರಾದ ನಂಜುಂಡಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಕೊಳ್ಳೇಗಾಲ ಪಟ್ಟಣದಲ್ಲಿ ವೃತ್ತದಲ್ಲಿ ಸ್ಥಾಪಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮಾಲಾರ್ಪಣೆ ಮಾಡಿದರು. ಶಾಸಕರಾದ ಎನ್. ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net