ರಾಜ್ಯದಲ್ಲಿ ಎರಡೇ ತಿಂಗಳಲ್ಲಿ 14000 ಕೇಸ್ !

mla s.n.Channabasappa
ಶಾಸಕ ಎಸ್.ಎನ್.ಚನ್ನಬಸಪ್ಪ
Published on

ಶಿವಮೊಗ್ಗ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಹಾಗಿದ್ದರೆ ಕೇವಲ ಎರಡೇ ತಿಂಗಳಲ್ಲಿ 13,940 ಕೊಲೆ, ದರೋಡೆ, ಹಲ್ಲೆ, ಫೋಕ್ಸೋ ಪ್ರಕರಣಗಳು ಏಕೆ ದಾಖಲಾಗಿವೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಪ್ರಶ್ನಿಸಿದರು.

ಜನವರಿಯಲ್ಲಿ 118 ಮತ್ತು ಫೆಬ್ರವರಿಯಲ್ಲಿ 83 ಕೊಲೆಗಳು ಆಗಿವೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 7 ಕೊಲೆ ಆಗಿದೆ. ಇದು ಕರ್ನಾಟಕ ಸರ್ಕಾರದ ಆಡಳಿತದ ಕೈಗನ್ನಡಿ. ದೇಶದ್ರೋಹಿ ಕಾಂಗ್ರೆಸ್‌ಗೆ ಆಡಳಿತ ನಡೆಸುವ ನೈತಿಕತೆ ಇಲ್ಲ. ಕಾನೂನು ಸುವ್ಯವಸ್ಥೆ ತಕ್ಷಣ ಸರಿಪಡಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net