14 ಶಿಕ್ಷಕರಿಗೆ ‘ಶಿಷ್ಯರು ಮೆಚ್ಚಿದ ಗುರು’ ಪ್ರಶಸ್ತಿ ಪ್ರದಾನ

1
Published on

ಮೈಸೂರು: ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು 10ನೇ ವರ್ಷದ ನೇಗಿಲಯೋಗಿ ವಿದ್ಯಾವರ್ಧಕ ವಿಭಾಗಮಟ್ಟದ ‘ಶಿಷ್ಯರು ಮೆಚ್ಚಿದ ಗುರು’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದಲ್ಲಿ ಭಾನುವಾರ ನಡೆಯಿತು.


ಜಯನಗರದಲ್ಲಿರುವ ಟ್ರಸ್ಟ್‌ನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿ.ಆರ್.ಶಂಕರಪ್ಪ(ಪ್ರಾಥಮಿಕ ವಿಭಾಗ), ಎಸ್.ಹರ್ಷ(ಪ್ರೌಢಶಾಲಾ ವಿಭಾಗ), ಸಿದ್ದರಾಜು ಬೆಳ್ಳಯ್ಯ(ಪಿಯುಸಿ ವಿಭಾಗ), ಎಚ್.ಕೆ.ರಾಮಚಂದ್ರ(ಕೈಗಾರಿಕಾ ತರಬೇತಿ ವಿಭಾಗ), ಜಿ.ಅಮರನಾಥ(ಡಿಪ್ಲೋಮಾ), ಪ್ರೊ.ಎಂ.ಎಸ್.ಮನೋನ್ಮಣಿ( ಪದವಿ), ಡಾ.ಎಂ.ಆರ್.ಪೂಜಾ(ಇಂಜಿನಿಯರಿಂಗ್), ಡಾ.ಲಕ್ಷ್ಮೇಗೌಡ( ವೈದ್ಯಕೀಯ), ಡಾ.ಎಂ.ಎನ್.ಸಂಜಿತ್(ಕಾನೂನು), ಎಂ.ಎನ್.ಪರಮಶಿವಯ್ಯ( ದೈಹಿಕ ಶಿಕ್ಷಣ), ಜಿ.ಎಂ.ಸತೀಶ್(ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ), ಡಾ.ಬಿ.ಪಿ.ಮೂರ್ತಿ(ಯೋಗ), ಎಸ್.ಸುನಿತಾ(ನೃತ್ಯಕಲೆ), ಡಾ.ಎಚ್.ಆರ್.ಕನ್ನಿಕಾ(ಮಕ್ಕಳ ಸ್ಪರ್ಧಾತ್ಮಕ ಶಿಕ್ಷಣ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ.ಕವಿತಾ ರೈ, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾನಿಲಯದ ಸಹ ನಿರ್ದೇಶಕಿ(ಅಭಿವೃದ್ಧಿ) ಎಚ್.ಎನ್.ಗೀತಾಂಭ, ಟ್ರಸ್ಟ್‌ನ ಗೌರವಾಧ್ಯಕ್ಷ ಪ್ರೊ.ಕೆ.ಆರ್.ರಂಗಯ್ಯ, ಉಪಾಧ್ಯಕ್ಷ ಬರಕ್ಕಿ ಪಿ.ಮಹಾದೇವಪ್ಪ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net