

ವಿಜಯವಾಣಿ ಸುದ್ದಿಜಾಲ ಕಾರವಾರ ಪೊಲೀಸರಿಗೆ ತಾನು ಮಾಡಿದ ಅಪರಾಧ ಮರೆತೇ ಹೋಯಿತು. ಬಚಾವಾದೆ ಎಂದು ತಿರುಗಾಡಿಕೊಂಡಿದ್ದವನಿಗೆ ಶನಿವಾರ ಶಾಕ್ ಕಾದಿತ್ತು. ಬರೋಬ್ಬರಿ
14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನದ ಆರೋಪಿಯನ್ನು ಕದ್ರಾ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಅಸ್ನೋಟಿ ಮೂಲದ ಸಂಶುದ್ದೀನ್ ಪೀರಸಾಬ ಸುಳ್ಳದ ಬಂಧಿತ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕದ್ರಾ ಕೆಪಿಸಿ ಕಾಲನಿಯ ಸುಬ್ರಾಯ ಮನೋಹರ ಟೇಮಕರ್ ಅವರ ಮನೆಯಲ್ಲಿ 2008 ರ ಅಕ್ಟೋಬರ್ 8 ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ ಸುಗುಣಾ ರಾವುತ್, ಚಂದ್ರಶೇಖರ ಯಲ್ಲಪ್ಪ ಹಣಗಿ, ಮಂಜುನಾಥ ಮುತ್ತಣ್ಣ ಬಿಂಗಿ ಅವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಆದರೆ, ಇನ್ನೊಬ್ಬಆರೋಪಿ ಸಂಶುದ್ದೀನ ತಲೆಮರೆಸಿಕೊಂಡಿದ್ದ. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಆರೋಪಿಯ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಕಾರವಾರ ಪದ್ಮನಾಭನಗರದ ದೇವಳಿವಾಡದಲ್ಲಿ ವಾಸವಿದ್ದು, ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯನ್ನು ಶನಿವಾತ ಬಂಧಿಸಲಾಗಿದೆ.
ಸಿಪಿಐ ಗೋವಿಂದರಾಜ ದಾಸರಿ, ಪಿಎಸ್ಐ ಶೇಡಜಿ ವಾಸು ಚೌಹಾಣ, ಎಎಸ್ಐ ಮಾದೇವ ಫಳ, ಹುಸೇನ್ ಚಪ್ಪರಕರ್, ಸಿಬ್ಬಂದಿ ಗೋಪಾಲ ಎಂ.ಚೌಹಾಣ್, ರಾಮೇಶ್ವರ ಪವಾರ, ಮಂಜುನಾಥ ಜಾಲಿ, ನಾಗರಾಜ ತಿಮ್ಮಾಪುರ, ಅಜಿತಕುಮಾರ ನಾಯ್ಕ, ಅರವಿಂದ ಭಜಂತ್ರಿ,ನಾಗವೇಣಿ ಎಚ್ಸಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಿಡಿಆರ್ ವಿಭಾಗದ ರಮೇಶ ನಾಯ್ಕ ಕಾಯರ್ಾಚರಣೆಯಲ್ಲಿ ಪಾಲ್ಗೊಂಡಿದ್ದರು.