

ಕಲಬುರಗಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನಿAದ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ೧೫೪ ವಿದ್ಯಾರ್ಥಿನಿಯರಿಗೆ ೧೪.೩೨ ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹಮ್ಮದ್ ಮಾತನಾಡಿ, ಬದಲಾವಣೆಗೆ ಶಿಕ್ಷಣ ಪ್ರಬಲ ಸಾಧನವಾಗಿದ್ದು, ವಿದ್ಯಾರ್ಥಿ ವೇತನದಿಂದ ಮಹಿಳಾ ಶಿಕ್ಷಣಕ್ಕೆ ಕೊಡುಗೆ ದೊರೆಯಲಿದೆ. ಕರ್ನಾಟಕದಲ್ಲಿ ೪೯೧ ಕಾಲೇಜುಗಳ ೫೫೦೧ ಹೆಣ್ಣು ಮಕ್ಕಳ ವ್ಯಾಸಂಗಕ್ಕೆ ನೆರವಾಗುವ ದೃಷ್ಟಿಯಿಂದ ಒಟ್ಟು ೪.೭೪ ಕೋಟಿ ರೂ. ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಮಲಬಾರ್ ಚಾರಿಟೇಬಲ್ ಟ್ರಸ್ಟ್ ೧೯೯೯ರಲ್ಲಿ ಆರಂಭವಾಗಿದ್ದು, ಈ ಮೂಲಕ ಸಮೂಹ ಸಂಸ್ಥೆಯ ವಾರ್ಷಿಕ ಲಾಭದ ಶೇ.೫ ಭಾಗವನ್ನು ಶಿಕ್ಷಣ, ಆರೋಗ್ಯ, ಪರಿಸರ ಸುಸ್ಥಿರತೆ, ಬಡತನ ನಿರ್ಮೂಲನೆಗೆ ನೀಡಿ, ದುರ್ಬಲ ವರ್ಗಗಳ ಸಬಲೀಕರಣಕ್ಕೆ ಸಹಕಾರ ನೀಡಲಾಗುತ್ತಿದೆ ಎಂದರು.
೨೦೦೭ರಲ್ಲಿ ಆರಂಭವಾದ ಮಲಬಾರ್ ರಾಷ್ಟಿçÃಯ ವಿದ್ಯಾರ್ಥಿ ವೇತನ ಕಾರ್ಯಕ್ರಮವೂ ಸಿಎಸ್‌ಆರ್‌ನಡಿ ಇದುವರೆಗೆ ೬೦ ಕೋಟಿ ರೂ. ವಿನಿಯೋಗಿಸಿದ್ದು, ದೇಶಾದ್ಯಂತ ೭೫ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಿದ್ದು, ಕರ್ನಾಟಕದಲ್ಲಿ ೨೬ ಸಾವಿರ ವಿದ್ಯಾರ್ಥಿನಿಯರಿಗೆ ೧೬.೮೨ ಕೋಟಿ ರೂ. ನೆರವು ನೀಡಲಾಗಿದೆ ಎಂದರು.
ಹಸಿವು ಮುಕ್ತ ಜಗತ್ತು ಯೋಜನೆ ಅಡಿ ದೇಶಾದ್ಯಂತ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದೆ. ದೇಶದ ೧೭ ರಾಜ್ಯಗಳ ೮೧ ನಗರಗಳಲ್ಲಿ ನಿತ್ಯ ೬೦,೦೦೦ಕ್ಕೂ ಅಧಿಕ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ. ಝಾಂಬಿಯಾ ದೇಶದಲ್ಲಿ ಶಾಲಾ ಮಕ್ಕಳಿಗೆ ನಿತ್ಯ ೧೦,೦೦೦ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ. ದೇಶದಲ್ಲಿ ೨೦೦ ಕೇಂದ್ರಗಳಲ್ಲಿ ನಿತ್ಯ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಊಟ ವಿತರಿಸುವ ಕಾರ್ಯಕ್ರಮ ರೂಪಿಸಿದೆ. ವೃದ್ಧ ಮಹಿಳೆಯರಿಗೆ ಗ್ರಾಂಡ್‌ಮಾ ಹೋಂ ಯೋಜನೆ ಆರಂಭಿಸಿದ್ದು, ನಿರ್ಗತಿಕರಿಗೆ ಆಶ್ರಯ, ಔಷದೋಪಚಾರ ಮಾಡಲಾಗುತ್ತಿದೆ ಎಂದರು.
ಶಾಲೆಯಿಂದ ಹೊರಗುಳಿದ ಮಕ್ಕಳ ಶಿಕ್ಷಣಕ್ಕಾಗಿ ೧೨ ರಾಜ್ಯಗಳಲ್ಲಿ ೫೮೧ ಮೈಕ್ರೋ-ಲರ್ನಿಂಗ್ ಸೆಂಟರ್ ಸ್ಥಾಪಿಸಿದ್ದು, ಇದುವರೆಗೆ ೨೫,೮೦೦ ವಿದ್ಯಾರ್ಥಿಗಳಿಗೆ ನೆರವು ನೀಡಲಾಗಿದೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಮುಖಂಡ ನೀಲಕಂಠರಾವ ಮೂಲಗೆ, ಉದ್ಯಮಿ ಲಾಲ್ ಅಹ್ಮದ್ ಬಾಂಬೆ ಸೇಠ ಭಾಗವಹಿಸಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಚೆಕ್ ಹಸ್ತಾಂತರಿಸಿದರು.