

ಧಾರವಾಡ: ಜಿಲ್ಲೆಯಲ್ಲಿ ಸೊಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಇನ್ನಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಉತ್ತರ ಕನ್ನಡ ಜಿಲ್ಲೆಯ ಮೂಲಕ ಹೊರ ರಾಜ್ಯ ಮತ್ತು ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅವರನ್ನು ತಪಾಸಣೆ ಮಾಡಲು ಜಿಲ್ಲೆಯಲ್ಲಿ ಒಟ್ಟು 14 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ, ಅವುಗಳ ಕರ್ತವ್ಯಗಳ ಕುರಿತು ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಚೆಕ್ಪೋಸ್ಟ್ ಸ್ಥಳಗಳು: ಕಾರವಾರ ರಸ್ತೆ ಹುಬ್ಬಳ್ಳಿ, ರೋಣ ಕ್ರಾಸ್ ರಸ್ತೆ ನವಲಗುಂದ, ಸಂಗಟಿಕೊಪ್ಪ ಕಲಘಟಗಿ, ಹಾರೋಬೆಳವಡಿ, ಗೋವಾ ರಸ್ತೆ ಅಳ್ನಾವರ, ಹಳಿಯಾಳ ರಸ್ತೆ ಧಾರವಾಡ, ಕೊಂಡಿಕೊಪ್ಪ ಕ್ರಾಸ್ ಅಣ್ಣಿಗೇರಿ, ಗುಡಿಗೇರಿ ಕ್ರಾಸ್ ಲಕ್ಷೆ್ಮೕಶ್ವರ ರಸ್ತೆ ಕುಂದಗೋಳ, ಗಬ್ಬೂರ ಕ್ರಾಸ್ ಹುಬ್ಬಳ್ಳಿ, ಅಮರಗೋಳ ಕ್ರಾಸ್ ಶಿವಳ್ಳಿ, ಧಾರವಾಡದ ಕೃಷಿ ವಿವಿ, ಕೆಲಗೇರಿ, ನುಗ್ಗಿಕೇರಿ ಹಾಗೂ ಜೆಎಸ್ಎಸ್ ಕಾಲೇಜು ವಿದ್ಯಾಗಿರಿ. ಚೆಕ್ಪೋಸ್ಟ್ಗಳಲ್ಲಿ ದಿನದ 24 ಗಂಟೆ ಒಬ್ಬ ಹಿರಿಯ ಅಧಿಕಾರಿ, ಒಬ್ಬ ಆರೋಗ್ಯ ಸಹಾಯಕರು ಹಾಗೂ ಪೊಲೀಸ್ ಸಿಬ್ಬಂದಿ 3 ತಂಡಗಳಾಗಿ ಕಾರ್ಯನಿರ್ವಹಿಸಬೇಕು. ನಿಯೋಜಿಸಿದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾತಿ ವರದಿ ಮಾಡಿಕೊಳ್ಳಬೇಕು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಪ್ರತಿದಿನ ವರದಿ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ಆನ್ಲೈನ್ನಲ್ಲಿ ಹೆಸ್ಕಾಂ ಬಿಲ್ ಪಾವತಿಗೆ ಮನವಿ: ಹೆಸ್ಕಾಂನ ವಿದ್ಯುತ್ ಗ್ರಾಹಕರು ಪೇಟಿಎಂ, ಅಮೇಜಾನ್, ಗೂಗಲ್ ಪೇ, ಫೋನ್ ಪೇ ಮತ್ತಿತರ ಆನ್ಲೈನ್ ಬ್ಯಾಂಕಿಂಗ್ ಮೂಲಕ ವಿದ್ಯುತ್
ಸಣ್ಣ ಕೈಗಾರಿಕೆಗಳ ಸಂಘದ ಬೆಂಬಲ
ಹುಬ್ಬಳ್ಳಿ: ಕರೊನಾ ತಡೆಗಟ್ಟಲು ಸರ್ಕಾರ ನೀಡುವ ಸೂಚನೆ, ಆದೇಶ ಪಾಲನೆಗೆ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಬದ್ಧವಾಗಿದೆ. ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆ ಸೇರಿ ರ್ಚಚಿಸಿದ ಸಂಘದ ಪದಾಧಿಕಾರಿಗಳು, ಸದಸ್ಯರು, ಕೈಗಾರಿಕಾ ಪ್ರದೇಶದಲ್ಲಿ ಆಟೋದಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು. ಭಿತ್ತಿಪತ್ರಗಳನ್ನು ಮುದ್ರಿಸಿ ಎಲ್ಲೆಡೆ ಹಂಚುವ ಮೂಲಕ ಜನಜಾಗೃತಿ ಮೂಡಿಸಲಾಯಿತು. ಮುಂಬರುವ ದಿನಗಳಲ್ಲಿಯೂ ಸರ್ಕಾರದ ಸೂಚನೆ ಪಾಲಿಸಲು ಸಂಘದ ಎಲ್ಲರೂ ಬದ್ಧರಿರುವುದಾಗಿ ಅಧ್ಯಕ್ಷ ನಿಂಗಣ್ಣ ಬಿರಾದಾರ ತಿಳಿಸಿದ್ದಾರೆ.
ಹೊಸ ಯಲ್ಲಾಪುರದಲ್ಲಿ ರಾತ್ರಿಯೂ ಗಸ್ತು
ಧಾರವಾಡ: ಕರೊನಾ ಸೋಂಕು ದೃಢಪಟ್ಟ ವ್ಯಕ್ತಿಯ ನಿವಾಸ ಸ್ಥಳವಾದ ಹೊಸ ಯಲ್ಲಾಪುರ ಸುತ್ತಲಿನ 3 ಕಿ.ಮೀ. ಪ್ರದೇಶದಲ್ಲಿ ಜನ, ವಾಹನ ಸಂಚಾರ ನಿರ್ಬಂಧ ಆದೇಶ ಜಾರಿಯಾಗಿರುವುದರಿಂದ ಕಂದಾಯ ಇಲಾಖೆ, ಪಾಲಿಕೆ, ಪೊಲೀಸ್ ಅಧಿಕಾರಿಗಳ ತಂಡ ಸೊಮವಾರ ರಾತ್ರಿಯೂ ಗಸ್ತಿಗೆ ಇಳಿದಿತ್ತು. ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ತಹಸೀಲ್ದಾರ್ ಸಂತೋಷಕುಮಾರ ಬಿರಾದಾರ ಹಾಗೂ ಸಿಬ್ಬಂದಿ, ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ತಂಡಗಳನ್ನು ರಚಿಸಿಕೊಂಡು ಗಸ್ತು ಮುಂದುವರಿಸಿದೆ.
ಹೊಸ ಯಲ್ಲಾಪುರ ಸಂರ್ಪಸುವ 15 ರಸ್ತೆಗಳಲ್ಲಿ ನಾಕಾಬಂದಿ ನಡೆಯುತ್ತಿದೆ.
ಸಾರ್ವಜನಿಕ ಕಚೇರಿಗಳಲ್ಲಿ ಆಯ್ದ ಸೇವೆ ಸ್ಥಗಿತ
ಧಾರವಾಡ: ಸರ್ಕಾರಿ ಮತ್ತು ಸಾರ್ವಜನಿಕ ಕಚೇರಿಗಳಲ್ಲಿ ಸಾರ್ವಜನಿಕರ ಬರುವಿಕೆಯನ್ನು ತಪ್ಪಿಸಲು ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್ 19 ನಿಯಂತ್ರಣ 2020ರ ನಿಯಮ 12ರ ಅಡಿ ಪ್ರಕೃತಿ ವಿಕೋಪ ನಿರ್ವಹಣೆ ಕಾಯ್ದೆ 2005ರ ಅನ್ವಯ ಕೆಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ನಗರದ ಹೊಯಲ್ಲಾಪುರ ಸುತ್ತಲಿನ 3 ಕಿ.ಮೀ. ವ್ಯಾಪ್ತಿಯ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುತ್ತಿರುವ ಅಟಲ್ಜಿ ಜನಸ್ನೇಹಿ ಕೇಂದ್ರ, ಸ್ಪಂದನ ಕೇಂದ್ರ ಮತ್ತು ಆಧಾರ್ ಸೇವೆ ಒದಗಿಸುತ್ತಿರುವ ಕೇಂದ್ರಗಳಲ್ಲಿನ ಸೇವೆಗಳು, ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೀಡಲಾಗುತ್ತಿರುವ ಹೊಸ ವಾಹನ ಚಾಲನಾ ರಹದಾರಿ, ಕಲಿಯುವವರ ಪರವಾನಗಿ ನೋಂದಣಿ ನೀಡುವುದಿಲ್ಲ. ಆದರೆ, ವಾಹನ ಚಾಲನಾ ಪರವಾನಗಿಯ ನವೀಕರಣ ಮಾಡಿಸಿಕೊಳ್ಳಲು ನಿರ್ಬಂಧ ಅನ್ವಯಿಸುವುದಿಲ್ಲ.
ಉಪ ನೋಂದಣಾಧಿಕಾರಿಗಳ ಕಚೇರಿಯ ಸ್ಥಿರ ಆಸ್ತಿ ನೋಂದಣಿ ಸೇವೆಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾ.ಪಂ. ವ್ಯಾಪ್ತಿಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಖಾತೆ, ಗ್ರಾಮಸಭೆ, ಇತರೆ ಲೈಸನ್ಸ್ ನೀಡುವಿಕೆ, ಜನನ ಮರಣ ಪ್ರಮಾಣಪತ್ರಗಳನ್ನು ವಿತರಿಸುವ ಸೇವೆಗಳು, ಸಹಕಾರಿ ಸಂಘಗಳ ಉಪ ನಿಬಂಧಕರು ಹಾಗೂ ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕರು ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ನೀಡಲಾಗುವ ಸೇವೆಗಳನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಲಾಗಿದೆ.
ಕಾನೂನು ಕ್ರಮ ಎಚ್ಚರಿಕೆ: ತುರ್ತು ಹಾಗೂ ದಿನನಿತ್ಯದ ಸೇವೆಗಳಿಗೆ ಅಂದರೆ ಬ್ಯಾಂಕ್, ಅಂಚೆ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸೇವೆಗಳು, ಸ್ವಚ್ಛತೆ ಕಾರ್ಯಕ್ರಮಗಳು, ಕುಡಿಯುವ ನೀರು, ವಿದ್ಯುಚ್ಛಕ್ತಿ ಪೂರೈಕೆ, ಒಳಚರಂಡಿ ವ್ಯವಸ್ಥೆಗಳು, ದಿನಸಿ, ಹಣ್ಣು ತರಕಾರಿ ಮಾರುಕಟ್ಟೆಗಳು, ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧ ಅಂಗಡಿಗಳು, ಶವಸಂಸ್ಕಾರ ಮುಂತಾದ ಸೇವೆಗಳು ಹಾಗೂ ತುರ್ತು ಸೇವೆಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದರೂ ಕಚೇರಿಗಳಿಗೆ ರಜೆ ಘೊಷಣೆ ಮಾಡಿರುವುದಿಲ್ಲ. ಸಂಬಂಧಿಸಿದ ಎಲ್ಲ ಅಧಿಕಾರಿ, ಸಿಬ್ಬಂದಿ ವರ್ಗ ಎಂದಿನಂತೆ ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು. ಅನಧಿಕೃತ ಗೈರು ಹಾಜರಿ ಅಥವಾ ಕಚೇರಿಯನ್ನು ತೆರೆಯದಿದ್ದರೆ ಅಧಿಕಾರಿ, ಸಿಬ್ಬಂದಿ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆದೇಶ ಪಾಲಿಸದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.