

ಹುಕ್ಕೇರಿ: ತಾಲೂಕಿನ ಎಲಿಮುನ್ನೋಳ್ಳಿ ಗ್ರಾಪಂಗೆ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಮೀರಾಸಾಬ್ ಮುಲ್ತಾನಿ ಹಾಗೂ ಉಪಾಧ್ಯಕ್ಷೆಯಾಗಿ ಸುರೇಖಾ ಮಾಳಾಜ ಆಯ್ಕೆಯಾಗಿದ್ದಾರೆ.
ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ 8 ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು. 9 ಮತ ಪಡೆದ ದುಂಡಪ್ಪ ಮರೆನ್ನವರ ವಿರುದ್ಧ 14 ಮತ ಪಡೆದು ಮೀರಾಸಾಬ್ ಮುಲ್ತಾನಿ ಅಧ್ಯಕ್ಷರಾದರು. 10 ಮತ ಪಡೆದ ಅನಿತಾ ಇಮಗೌಡನವರ ವಿರುದ್ದ 14 ಮತ ಪಡೆದು ಸುರೇಖಾ ಮಾಳಾಜ ಉಪಾಧ್ಯಕ್ಷೆಯಾದರು.
ಚುನಾವಣಾಧಿಕಾರಿಯಾಗಿ ಆರ್.ಬಿ. ನಾಯ್ಕರ, ಸಹಾಯಕ ಚುನಾವಣಾಧಿಕಾರಿಯಾಗಿ ಕೆ.ಪಿ.ಬೇಡರಟ್ಟಿ ಕಾರ್ಯನಿರ್ವಹಿಸಿದರು. ಗ್ರಾಪಂ ಕಾರ್ಯದರ್ಶಿ ರಾಮಣ್ಣ ಬಹಾದ್ದೂರೆ, ಶಿವನಾಯಿಕ ನಾಯಿಕ ಸದಸ್ಯರು ಹಾಗೂ ಗ್ರಾಮಸ್ಥರು ಅಧ್ಯಕ್ಷ ಉಪಾಧ್ಯಕ್ಷೆಯನ್ನು ಸತ್ಕರಿಸಿದರು. ಹುಕ್ಕೇರಿ ಪಿಐ ರಫೀಕ್‌ಅಹ್ಮದ್ ತಹಸೀಲ್ದಾರ, ಪಿಎಸ್‌ಐ ಅಭಿಜಿತ ಅಕ್ಕತಂಗೇರಹಾಳ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.