ಗೆಲುವಿನ ನಗೆ ಬೀರಿದ 14 ತಂಡಗಳು

3 gkp 3
Published on

ಕೊಡಗು : ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆಯ ವಿಜಯಲಕ್ಷ್ಮೀ ಮತ್ತು ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ 11ನೇ ದಿನದ ಪಂದ್ಯಾಟದಲ್ಲಿ 14 ತಂಡಗಳು ಗೆಲುವಿನ ನಗೆ ಬೀರಿದವು.


ಮೈದಾನ ಒಂದರಲ್ಲಿ ಚೆಪ್ಪುಡಿರ ಮತ್ತು ಬಾಡುಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಬಾಡುಮಂಡ ತಂಡ 8 ಓವರ್‌ಗಳಲ್ಲಿ ವಿಕೆಟ್ 2 ನಷ್ಟಕ್ಕೆ 77 ರನ್ ಗಳಿಸಿತು. ಚೆಪ್ಪುಡಿರ ತಂಡ 8 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿ 71 ರನ್ ಗಳಿಂದ ಸೋಲು ಕಂಡಿತು.


ಕೋಚೇರ ಮತ್ತು ಅಜ್ಜಮಾಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಅಜ್ಜಮಾಡ ತಂಡ 8 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತು. ಕೋಚೇರ ತಂಡ 8 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಶಾಂತೆಯಂಡ ತಂಡ ಬಾರದ ಕಾರಣ ನಂಬುಡಮಾಡ ತಂಡಕ್ಕೆ ವಾಕ್ ಓವರ್ ನೀಡಲಾಯಿತು.


ಚೆಟ್ಟೀರ ಮತ್ತು ಕರಿನೆರವಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕರಿನೆರವಂಡ ತಂಡ 8 ಓವರ್‌ಗಳಲ್ಲಿ ವಿಕೆಟ್ 6 ನಷ್ಟಕ್ಕೆ 104 ರನ್ ಗಳಿಸಿತು. ಚೆಟ್ಟೀರ ತಂಡ 8 ಓವರ್ ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 52 ರನ್ ಗಳಿಸಿ ಸೋಲು ಕಂಡಿತು.


ಮೂಕಳಮಾಡ ಮತ್ತು ಮೂಕಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೂಕಂಡ ತಂಡ 8 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತು. ಮೂಕಳಮಾಡ ತಂಡ 8 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿ 80 ರನ್ ಗಳಿಂದ ಸೋಲು ಕಂಡಿತು.


ಅಪ್ಪಾರಂಡ ಮತ್ತು ಚೊಟ್ಟೆಯಂಡಮಾಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಅಪ್ಪಾರಂಡ ತಂಡ 8 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿತು. ಚೊಟ್ಟೆಯಂಡಮಾಡ ತಂಡ 3.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಮಾಲೇಟಿರ (ಕೆದಮುಳ್ಳೂರು) ಮತ್ತು ಆಪಟ್ಟೀರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮಾಲೇಟಿರ ತಂಡ 8 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿತು. ಆಪಟ್ಟಿರ ತಂಡ 8 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿ 37 ರನ್ ಗಳ ಸೋಲು ಕಂಡಿತು.


ಮೈದಾನ ಎರಡರಲ್ಲಿ ಕಾಚಪನೇರ ಮತ್ತು ಉದ್ದಪಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕಾಚಪನೇರ ತಂಡ 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 87 ರನ್ ಗಳಿಸಿತು. ಉದ್ದಪಂಡ ತಂಡ 3.3 ಓವರ್ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು.


ನಡಿಕೇರಿಯಂಡ ಮತ್ತು ಕೊಕ್ಕಲೇಮಾಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕೊಕ್ಕಲೇಮಾಡ ತಂಡ 8 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿತು. ನಡಿಕೇರಿಯಂಡ ತಂಡ 6.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.


ಅಲ್ಲುಮಾಡ ಮತ್ತು ನಂಪಿಯಪಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಅಲ್ಲುಮಾಡ ತಂಡ 8 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತು. ನಂಬಿಯಪಂಡ ತಂಡ 5.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಮಹಿಳೆಯರ ವಿಭಾಗ:
ಬಾಡುಮಂಡ ಮತ್ತು ತೀತಮಾಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಬಾಡುಮಂಡ ತಂಡ 5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿತು. ತೀತಮಾಡ ತಂಡ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿ ಪಂದ್ಯ ಟೈ ಆಯಿತು. ಬಾಡುಮಂಡ ತಂಡ ಸೂಪರ್ ಓವರ್ ನಲ್ಲಿ ಗೆಲುವು ದಾಖಲಿಸಿತು.


ಮಾಪಣಮಾಡ ಮತ್ತು ಮಾಲೇಟಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮಾಲೇಟಿರ ತಂಡ 5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿತು. ಮಾಪಣಮಾಡ ತಂಡ 5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿ 23 ರನ್ ಗಳ ಸೋಲು ಕಂಡಿತು. ಅಜ್ಜಿಕುಟ್ಟೀರ ಮತ್ತು ಕಂಬೀರಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಅಜ್ಜಿಕುಟ್ಟೀರ ತಂಡ 5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿತು. ಕಂಬೀರಂಡ ತಂಡ 5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿ 13 ರನ್ ಗಳ ಸೋಲು ಕಂಡಿತು.


ಕಾಳಕಂಡ ಮತ್ತು ಅರಮಣಮಾಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕಾಳಕಂಡ ತಂಡ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 55 ರನ್ ಗಳಿಸಿತು. ಅರಮಣಮಾಡ ತಂಡ 4.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

03 ಜಿಕೆಪಿ 02: ಪಂದ್ಯಾಟದ ಕ್ಷಣ
03 ಜಿಕೆಪಿ 03: ಮಹಿಳಾ ತಂಡದ ಬ್ಯಾಟರ್ ಬ್ಯಾಟ್ ಬೀಸಿದ ಕ್ಷಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net