ಸಮೀಕ್ಷೆ ಪೂರ್ಣಗೊಳಿಸಿದ 14 ಶಿಕ್ಷಕರಿಗೆ ಸನ್ಮಾನ

FotoJet 2222
Published on

ಬಂಗಾರಪೇಟೆ:ಬಹಳಷ್ಟು ಪ್ರದೇಶದಲ್ಲಿ ನೆಟ್​ವರ್ಕ್​ ಮತ್ತು ಸರ್ವರ್​ ಸಮಸ್ಯೆ ಎದುರಾಗಿ ಶಿಕ್ಷಕರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಇದರಿಂದ ಗಣತಿ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಆದರೆ ಈ ಎಲ್ಲ ಸಮಸ್ಯೆಗಳನ್ನು ಎದುರಿಸಿ ತಾಲೂಕಿನ 14 ಶಿಕ್ಷಕರು ನಿಗದಿಪಡಿಸಿದ ಗಣತಿ ಕಾರ್ಯವನ್ನು 5 ದಿನದಲ್ಲಿ ಪೂರೈಸುವ ಮೂಲಕ ಇತರ ಗಣತಿದಾರರಿಗೆ ಮಾರ್ಗದರ್ಶಿಯಾಗಿದ್ದಾರೆ.

ಶಿಕ್ಷಕ ಎಸ್​.ಎ.ನಾಗರಾಜಪ್ಪ ಅವರ ಮೇಲ್ವಿಚಾರಣೆಯಲ್ಲಿ ಶಿಕ್ಷಕ್ಷರಾದ ಎಂ.ಮಂಜುಳಮ್ಮ (ದೊಡ್ಡವಲಗಮಾದಿ), ಅನುಸೂಯಮ್ಮ (ಕಾರಹಳ್ಳಿ), ಶಶಿಕುಮಾರ್​ (ಮುಗಳಬೆಲೆ), ಸುಜಾತ (ಎ.ಗೊಲ್ಲಹಳ್ಳಿ), ಜಿ.ಆರ್​.ಮಂಜುಳಾ (ಮುಗಳಬೆಲೆ), ಕೆ.ಎಂ.ಗೀತಾ (ಹಂಚಾಳ), ಶಿವಲಿಂಗಪ್ಪ (ಕುಪ್ಪನಹಳ್ಳಿ), ಸುಲೋಚನಾ (ಕಣಿಂಬೆಲೆ), ಎಂ.ಸಿ.ಸುರೇಶ್​ ( ಯಲವಹಳ್ಳಿ), ಎಂ.ಜಿ.ವೆಂಕಟೇಶ್​ (ರಾಮಲಿಂಗಾಪುರ), ಯಶೋದಮ್ಮ (ಗಾಜಗಾ), ಎನ್​.ಲಕ್ಷ್ಮಮ್ಮ (ಹುಣಸಿನಹಳ್ಳಿ), ವಿಮಲಮ್ಮ (ಜುಂಜನಹಳ್ಳಿ), ಎಂ.ನಾಗರಾಜು (ಕದಿರೇನಹಳ್ಳಿ)ಇವರುಗಳು ತಮಗೆ ನೀಡಿದ್ದ ಜಾತಿ ಗಣತಿ ಸಮೀಕ್ಷೆಯಲ್ಲಿ ಪ್ರಗತಿ ಸಾಧಿಸಿದ್ದಾರೆ. ಈ ಹಿನ್ನಲೆ ತಾಲೂಕು ಆಡಳಿತದಿಂದ ಗಾಂಧಿ ಜಯಂತಿ ಪ್ರಯುಕ್ತ ತಹಸೀಲ್ದಾರ್​ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ದಾಸರ್​, ದಾಸರಿ ಸಮಸ್ಯೆ: ಜಾತಿಗಣತಿ ಸಮೀಕ್ಷೆಯಲ್ಲಿ ಸರ್ವರ್​ ಸಮಸ್ಯೆ ಜತೆಗೆ ಸಣ್ಣ ದಾಸರ್​ ಮತ್ತು ಸಣ್ಣ ದಾಸರಿ ಸಮಸ್ಯೆಯನ್ನು ಹಲವು ಗಣತಿದಾರರು ಎದುರಿಸಬೇಕಾದ ಪ್ರಸಂಗ ಬಂದಿದೆ. ಸಣ್ಣ ದಾಸರ್​ ಪ್ರವರ್ಗ&1ಕ್ಕೆ ಸೇರುತ್ತದೆ. ಸಣ್ಣ ದಾಸರಿ ಎಸ್ಸಿ ವರ್ಗಕ್ಕೆ ಬರುತ್ತದೆ. ಈಗಾಗಿ ಬಹಳ ಕಡೆಗಳಲ್ಲಿ ಜಾತಿ ಕಾಲಂನಲ್ಲಿ ಯಾವುದು ನಮೂದು ಮಾಡಬೇಕೆಂಬ ಸಮಸ್ಯೆ ಎದುರಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಸಣ್ಣ ದಾಸರಿ ನಮೂದಿಗೆ ಹೇಳುತ್ತಿರುವುದರಿಂದ ಈ ಸಮಸ್ಯೆ ಉದ್ಬವಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net