ಮಂಗಳೂರಿನಲ್ಲಿ ಚಂಡಮಾರುತಕ್ಕೆ ಸಿಲುಕಿದ್ದು ಒಂದಲ್ಲ ಎರಡು ಬೋಟ್; 14 ಮಂದಿ ನಾಪತ್ತೆ

Boat F
ಎಂಟು ಜನರಿದ್ದ ಬೋಟ್​ನಲ್ಲಿದ್ದವರ ಪೈಕಿ ಒಬ್ಬರ ಶವ ಸಿಕ್ಕಿರುವುದು.
Published on

ಮಂಗಳೂರು: ದಕ್ಷಿಣ ಕನ್ನಡದ ಕರಾವಳಿಯಲ್ಲಿ ಇಂದು ಎಂಆರ್​ಪಿಎಲ್​ಗೆ ಸೇರಿದ ಟಗ್ ಬೋಟ್ ಅವಘಡ ಪ್ರಕರಣದಲ್ಲಿ ಇದುವರೆಗೆ ಸಿಲುಕಿಕೊಂಡಿದ್ದು ಒಂದು ಬೋಟ್​ ಅಲ್ಲ, ಎರಡು ಎಂಬ ಮಾಹಿತಿ ಹೊರಬಿದ್ದಿದೆ. ಎಂಆರ್​ಪಿಎಲ್​ಗೆ ಸೇರಿದ ಎರಡು ಬೋಟ್​ಗಳು ನಾಪತ್ತೆಯಾಗಿದ್ದು, ಎರಡರಲ್ಲಿ ಒಟ್ಟಿಗೆ 17 ಮಂದಿ ಇದ್ದರು.

ಎರಡು ಟಗ್​ ಬೋಟ್​ಗಳ ಪೈಕಿ ಒಂದರಲ್ಲಿ ಎಂಟು ಹಾಗೂ ಇನ್ನೊಂದರಲ್ಲಿ ಒಂಬತ್ತು ಮಂದಿ ಇದ್ದರು. ಆ ಪೈಕಿ 8 ಮಂದಿ ಇದ್ದ ಟಗ್ ಬೋಟ್​ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರಲ್ಲಿದ್ದ ಎಂಟು ಜನರ ಪೈಕಿ ಇಬ್ಬರು ಈಜಿ ದಡ ಸೇರಿದ್ದು, ಒಬ್ಬರ ಶವ ಪತ್ತೆಯಾಗಿದೆ. ಉಳಿದ ಐವರು ಇನ್ನೂ ಪತ್ತೆಯಾಗಿಲ್ಲ.

ಮತ್ತೊಂದೆಡೆ 9 ಮಂದಿ ಇದ್ದ ಟಗ್​ ಬೋಟ್ ಕುರಿತು ಇನ್ನೂ ಸುಳಿವು ಸಿಕ್ಕಿಲ್ಲ. ಈ ಬೋಟ್​ನಲ್ಲಿದ್ದ 9 ಮಂದಿ, ಇನ್ನೊಂದರಲ್ಲಿದ್ದ 8 ಜನರ ಪೈಕಿ ನಾಪತ್ತೆ ಆಗಿರುವ ಐವರು ಸೇರಿ ಒಟ್ಟು 14 ಮಂದಿ ಇನ್ನೂ ಪತ್ತೆಯಾಗಿಲ್ಲ. ನಾಪತ್ತೆ ಆಗಿರುವವರಿಗಾಗಿ ಕೋಸ್ಟಲ್ ಗಾರ್ಡ್​ ಸಿಬ್ಬಂದಿ ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net