ಬೀಗತನಕ್ಕೆ ಹೊರಟ್ಟಿದ್ದ ವಾಹನ ಪಲ್ಪಿ 14 ಜನರಿಗೆ ಗಾಯ

27-SGN-2
Published on

ಶಿಗ್ಗಾಂವಿ: ಬೀಗತನಕ್ಕೆ ಹೊರಟಿದ್ದ ಕ್ರೂಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 14 ಜನರು ಗಾಯಗೊಂಡ ಘಟನೆ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ತಡಸ ಬಳಿ ಸೋಮವಾರ ಸಂಭವಿಸಿದೆ.

ಸಿಂಧನೂರಿನಿಂದ ಶಿವಮೊಗ್ಗಕ್ಕೆ ಬೀಗತನಕ್ಕೆ ತೆರಳುತ್ತಿದ್ದ ವೇಳೆ ತಡಸ ಗ್ರಾಮದಿಂದ ಮುಂಡಗೋಡ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.

ಗಂಭೀರವಾಗಿ ಗಾಯಗೊಂಡ ಮೂವರನ್ನು ಹುಬ್ಬಳ್ಳಿ ಕೆಎಂಸಿಆರ್​ಐಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಗಾಯಾಳುಗಳಿಗೆ ತಡಸ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ತಡಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net