ಮಂಗಳೂರು ಪರಿಸರದಲ್ಲಿ ಮಾದಕವಸ್ತು ಸೇವನೆ 14 ಮಂದಿ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಮಾದಕ ಸೇವನೆ ಆರೋಪದಡಿ 3 ಪ್ರಕರಣಗಳಲ್ಲಿ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾದಕ ಸೇವನೆ ಆರೋಪದಡಿ ಇರಾ ಕುಕ್ಕಾಜೆ ನಿವಾಸಿ ಸಿರಾಜುದ್ದೀನ್ (39) ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಜೂ.8ರಂದು ಮಧ್ಯಾಹ್ನ 1.30ರ ವೇಳೆಗೆ ಉಳ್ಳಾಲ ತಾಲೂಕು ಬೆಳ್ಮಾ ಗ್ರಾಮದ ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಬಳಿ ಆರೋಪಿ ಸಿರಾಜುದ್ದೀನ್ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದಿದ್ದು, ಕೋಣಾಜೆ ಪೊಲೀಸರು ಆತನನ್ನು ವಶಪಡಿಸಿಕೊಂಡಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದಾಗ ಸಿರಾಜುದ್ದೀನ್ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ.
ಜೂ. 8ರಂದು ಬೆಳ್ಮಾ ದೇರಳಕಟ್ಟೆಯ ್ಲಾಮಾ ಸಿಟಿಯಾಸ್ ಅಪಾರ್ಟ್‌ಮೆಂಟ್ ಬಳಿ ಮಾದಕ ಸೇವನೆ ಆರೋಪದಲ್ಲಿ ಕಾಸರಗೋಡು ಬೆರ್ಕ ನಿವಾಸಿ ಹಾತೀಮ್ ಅಬೂಬಕ್ಕರ್ (21) ಎಂಬಾತನನ್ನು ಕೋಣಾಜೆ ಪೊಲೀಸರು ಬಂಧಿಸಿದ್ದಾರೆ.
ಜೂ.8ರಂದು ಬೆಳಗ್ಗೆ 11ಗಂಟೆಗೆ ಉಳ್ಳಾಲ ತಾಲೂಕು ಬೆಳ್ಮಾ ಗ್ರಾಮದ ದೇರಳಕಟ್ಟೆಯ ್ಲಾಮಾ ಸಿಟಿಯಾಸ್ ಅಪಾರ್ಟ್‌ಮೆಂಟ್ ಬಳಿ ಆರೋಪಿ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಆತನನ್ನು ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದು ದೃಢಪಟ್ಟಿದೆ.
ನಗರದ ರೈಲ್ವೇ ಸ್ಟೇಷನ್ ಪರಿಸರದ ಸುತ್ತಮುತ್ತ ಮಾದಕ ಸೇವನೆ ಆರೋಪದಲ್ಲಿ 12ಮಂದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರೈಲ್ವೆ ಸ್ಟೇಷನ್ ಪರಿಸರದ ಸುತ್ತ ಮುತ್ತ ಕೆಲವು ವ್ಯಕ್ತಿಗಳು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು, ಪಾಂಡೇಶ್ವರ ಪೊಲೀಸರು ಅವರಲ್ಲಿ 12ಮಂದಿಯನ್ನು ವಶಕ್ಕೆ ಪಡೆದು, ಗಾಂಜಾ ಅಥವಾ ಇತರ ಅಮಲು ಪದಾರ್ಥ ಸೇವಿಸಿದ್ದಾರೆಯೆ ಎಂಬುದರ ಬಗ್ಗೆ ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net