14ರ ಮಧ್ಯರಾತ್ರಿ ಸ್ವಾತಂತ್ರ್ಯೋತ್ಸವ ದಿನಾಚರಣೆ

14 midnight Independence Day celebration
ಬಾಗಲಕೋಟೆ ಪ್ರೆಸ್‌ಕ್ಲಬ್‌ನಲ್ಲಿ ಚಲನಚಿತ್ರ ನಿರ್ಮಾಪಕ ಘನಶಾಮ ಭಾಂಡಗೆ ಮಾತನಾಡಿದರು. ಮುಖಂಡರಾದ ಉಮೇಶ ಬರಗುಂಡಿ, ರಾಘವೇಂದ್ರ ಬಿಸನಾಳ, ಮೆಹೆಬೂಬ ತೊನಶ್ಯಾಳ, ಆನಂದ ಲಮಾಣಿ, ಶ್ರೀನಿವಾಸ ಗಾಡದ, ರಾಜು ನಾರಾಯಣಕರ ಇದ್ದರು
Published on

ಬಾಗಲಕೋಟೆ : ವೈಷ್ಣೋದೇವಿ ಕ್ರಿಯೇಷನ್ಸ್ ನೇತೃತ್ವದಲ್ಲಿ ನವನಗರದ ಸೆಕ್ಟರ್ 34 ರಲ್ಲಿ ಜಿವ್ಹೇಶ್ವರ ದೇವಸ್ಥಾನ ಆವರಣದಲ್ಲಿ ಆ.14 ರಂದು ಮಧ್ಯರಾತ್ರಿ 12 ಗಂಟೆಗೆ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಚಲನಚಿತ್ರ ನಿರ್ಮಾಪಕ ಘನಶಾಮ ಭಾಂಡಗೆ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ರಾತ್ರಿ 8 ಗಂಟೆಗೆ ಆರಂಭಗೊಳ್ಳಲಿದೆ.

ಸುರೇಶ ಓಶಿಯನ್ ಡ್ಯಾನ್ಸ್ ತಂಡ, 3ಡಿ ಡ್ಯಾನ್ಸ್ ಅಕಾಡೆಮಿ, ಅಪ್ಪು ಡ್ಯಾನ್ಸ್ ತಂಡ ಸೇರಿ ವಿವಿಧ ತಂಡಗಳು ದೇಶ ಭಕ್ತಿ ಗೀತೆಗಳಿಗೆ ನೃತ್ಯ ಮಾಡಲಿದ್ದಾರೆ ಎಂದರು.

ವೇದಿಕೆ ಕಾರ್ಯಕ್ರಮದಲ್ಲಿ ತೋಂಟದ ಸಿದ್ದರಾಮ ಸ್ವಾಮೀಜಿ, ಯರನಾಳದ ಗುರುಸಂಗನಬಸವ ಸ್ವಾಮೀಜಿ, ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಧ್ವಜಾರೋಹಣ ನೆರವೇರಿಸಲಿದ್ದಾರೆ.

ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್‌ಬಾಬು, ರಂಗಭೂಮಿ ನಟ ಗಣೇಶರಾವ್ ಕೇಸರಕರ, ಕಿರುತೆರೆ ನಟ ವೆಂಕಟೇಶ ಬಿ.ಎಂ., ನಟಿ ಸಾಕ್ಷಿ ಮೇಘನಾ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.

ವಿಪ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಸಚಿವ ಮುರುಗೇಶ ನಿರಾಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜ್ಯಯನಮಠ, ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಅನಿತಾ ಹದ್ದಣ್ಣವರ, ಡಾ.ಎಸ್.ಬಿ.ಚಿಮ್ಮನಕಟ್ಟಿ, ಮಾಧವ ಸೇವಾ ಕೇಂದ್ರದ ಅಧ್ಯಕ್ಷ ನಾಗರಾಜ ಹದ್ಲಿ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.

ಮುಖಂಡರಾದ ಉಮೇಶ ಬರಗುಂಡಿ, ರಾಘವೇಂದ್ರ ಬಿಸನಾಳ, ಮೆಹೆಬೂಬ ತೊನಶ್ಯಾಳ, ಆನಂದ ಲಮಾಣಿ, ಶ್ರೀನಿವಾಸ ಗಾಡದ, ರಾಜು ನಾರಾಯಣಕರ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net