ಗುಮಾಸ್ತನ ವಿರುದ್ಧ 14 ಲಕ್ಷ ರೂ. ವಂಚನೆ ಕೇಸ್

kote police station
ಕೋಟೆ ಪೊಲೀಸ್ ಠಾಣೆ
Published on

ಶಿವಮೊಗ್ಗ: ನಗರದ ಶಂಕರಮಠ ರಸ್ತೆಯ ಪ್ರಮುಖ ಕಾರು ಶೋ ರೂಮ್‌ವೊಂದರ ವಿಮಾ ವಿಭಾಗದ ಗುಮಾಸ್ತನ ವಿರುದ್ಧ 13.72 ಲಕ್ಷ ರೂ. ವಂಚನೆ ಪ್ರಕರಣ ದಾಖಲಾಗಿದೆ.

ವಿಮಾ ಪಾಲಿಸಿ ನವೀಕರಣಕ್ಕೆ ಕಾರು ಶೋ ರೂಂನ ವಿವಿಧ ಶಾಖೆಗಳಲ್ಲಿ ಸಂಗ್ರಹವಾಗುವ ಹಣವನ್ನು ಸೇಲ್ಸ್ ಎಗ್ಸಿಕ್ಯೂಟಿವ್‌ಗಳು ಗುಮಾಸ್ತನ ಬಳಿ ತಂದು ಕೊಡುತ್ತಿದ್ದರು. ಅದನ್ನು ಕೌಂಟರ್‌ನಲ್ಲಿ ಪಾವತಿಸುವ ಜವಾಬ್ದಾರಿ ಆತ ನಿರ್ವಹಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
2021ರ ಜು.1ರಿಂದ 2023ರ ಆ.26ರವರೆಗೆ ತೀರ್ಥಹಳ್ಳಿ ಮತ್ತು ಎನ್.ಆರ್.ಪುರ ಶಾಖೆಗಳಲ್ಲಿ ಪಾವತಿಸಿದ 13.72 ಲಕ್ಷ ರೂ. ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಕಾರು ಶೋ ರೂಂನ ವಿಮಾ ವಿಭಾಗದ ಮುಖ್ಯಸ್ಥ ಕೋಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net