ಜಿಲ್ಲೆಯಲ್ಲಿ 14 ದೃಷ್ಟಿ ಕೇಂದ್ರಗಳು ಪ್ರಾರಂಭ

Dristi Kendra
Published on

ಕಾರವಾರ: ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದಡಿಯಲ್ಲಿ, ರಾಜ್ಯದ ಪ್ರತಿಯೊಬ್ಬರಿಗೂ ಕಣ್ಣಿನ ಆರೈಕೆ ನೀಡುವ ಮತ್ತು ಅಂಧತ್ವ

ಪ್ರಮಾಣದ ದರವನ್ನು ಇಳಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಶಾಕಿರಣ ದೃಷ್ಠಿಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಉತ್ತರ ಕನ್ನಡ

ಜಿಲ್ಲೆಯಲ್ಲಿ 14 ದೃಷ್ಠಿಕೇಂದ್ರಗಳನ್ನು ಆರಂಭಿಸಲಾಗಿದೆ. ಆಶಾಕಿರಣ ಯೋಜನೆಯಡಿಯಲ್ಲಿ, ನೇತ್ರ ತಜ್ಞರು ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಲು ಪ್ರತಿ ಪಿಎಚ್‌ಸಿಗೆ ಹೋಗುವ ಬದಲು,

ಎಲ್ಲಾ ಜಿಲ್ಲೆ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಾಶ್ವತ

ಅಧಾರದ ಮೇಲೆ ದೃಷ್ಠಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಲು ಬಂದ ಸಾರ್ವಜನಿಕರಿಗೆ ಅಗತ್ಯ

ಪರೀಕ್ಷೆಯನ್ನು ಮಾಡಲಾಗುವುದು. ಅಲ್ಲದೇ ಕ್ಷೇತ್ರ ಸಿಬ್ಬಂದಿಗಳಾದ ಆಶಾ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ತಮ್ಮ ದಿನನಿತ್ಯದ

ಚಟುವಟಿಕೆ ಅಡಿಯಲ್ಲಿ ಮನೆ ಮನೆಗೆ ಭೇಟಿ ನೀಡಿದಾಗ ಶಂಕಿತ ದೃಷ್ಠಿದೋಶದ ಪ್ರಕರಣಗಳು ಕಂಡು ಬಂದಲ್ಲಿ ಹೆಚ್ಚಿನ ಕಣ್ಣಿನ ತಪಾಸಣೆಗೆ ಹತ್ತಿರದ

ದೃಷ್ಠಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ತಪ್ಪಿಸಬಹುದಾದ ಅಂಧತ್ವ ಮುಕ್ತ ಕರ್ನಾಟಕವನ್ನಾಗಿ ಮಾಡುವುದು ಈ ಕಾರ್ಯಕ್ರಮದ ಪ್ರಮುಖ ಗುರಿಯಾಗಿದ್ದು, ಕಣ್ಣಿನ ಪೊರೆ ಮತ್ತು

ವಕ್ರೀಕಾರಕ ದೋಷಗಳಿಂದ ದೃಷ್ಠಿ ಸಮಸ್ಯೆಗಳ ಸಂಭವವನ್ನು ಕಡಿಮೆ ಮಾಡಲು ಮತ್ತು ದೃಷ್ಠಿ ಕೇಂದ್ರಗಳಲ್ಲಿ ಕಣ್ಣಿನ ತಪಾಸಣೆ ಮತ್ತು ಆರೋಗ್ಯ

ಜಾಗೃತಿ ಕಾರ್ಯಕ್ರಮವನ್ನು ನಡೆಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ಎಲ್ಲಾ ಆಶಾಕಿರಣ ದೃಷ್ಠಿ ಕೇಂದ್ರ ಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಕನ್ನಡಕಗಳ ವಿತರಣೆ, ಶಸ್ತ್ರ ಚಿಕಿತ್ಸೆಗಳು ಮತ್ತು ಇತರೆ

ಕಣ್ಣಿನ ಚಿಕಿತ್ಸೆಗಳಿಗೆ ಉಚಿತ ವ್ಯವಸ್ಥೆ, ಉತ್ತಮ ದೃಷ್ಠಿಯ ಪ್ರಾಮುಖ್ಯತೆ ಮತ್ತು ಕಣ್ಣುಗಳನ್ನು ಹೇಗೆ ಉತ್ತಮವಾಗಿ ನೋಡಿಕೊಳ್ಳುವುದು ಎಂಬುದರ

ಕುರಿತು ಅರಿವು ಮೂಡಿಸಲಾಗುವುದು.

ಕಣ್ಣುಗಳನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದರ ಮೂಲಕ ಕಣ್ಣುಗಳನ್ನು ರಕ್ಷಿಸಿಕೊಳ್ಳಬಹುದಾಗಿದ್ದು, ವಕ್ರೀಕಾರಕ

ದೋಷಗಳನ್ನು ಸರಿಪಡಿಸಿ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಸಕಾಲದಲ್ಲಿ ಮಾಡಿಸಿಕೊಳ್ಳುವ ಮೂಲಕ ದೃಷ್ಟಿಗೆ ಆದ್ಯತೆ ನೀಡಬೇಕು. ಕಣ್ಣಿನ

ಸೋಂಕು ವಿಟಮಿನ್ ಎ ಕೊರತೆ, ಅಪೌಷ್ಠಿಕತೆ, ಅಕ್ಷಿಪಟಲದ ಗಾಯ, ಅನುವಂಶಿಕ ನ್ಯೂನತೆ ಅಂಧತ್ವಕ್ಕೆ ಮೂಲ ಕಾರಣಗಳಾಗಿದ್ದು, ಕಣ್ಣಿನ ವಿವಿಧ

ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದ್ದು, ಬಹುತೇಕ ಅಂಧತ್ವದ ಪ್ರಕರಣಗಳನ್ನು ಗುಣಪಡಿಸಬಹುದಾಗಿದೆ.

ಊಟದಲ್ಲಿ ಹಸಿರು ತರಕಾರಿ ಹಳದಿ ಮತ್ತು ಕೆಂಪು ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ, ಡಯಾಬಿಟಿಕ್ ರೆಟಿನೋಪತಿ ಮತ್ತು

ಗ್ಲಾಕೋಮಾದಂತಹ ಮೂಕ ರೋಗಗಳನ್ನು ನಿಯಮಿತವಾಗಿ ಪರೀಕ್ಷಿಸುವ ಮೂಲಕ ದೃಷ್ಠಿಯನ್ನು ಸಂರಕ್ಷಿಸಿಕೊಳ್ಳಬೇಕು, ಧೂಮಪಾನವು ಕಣ್ಣಿನ ಪೊರೆ

ಅಕ್ಷಿ ನರ ಹಾನಿ ಮತ್ತು ದೃಷ್ಠಿ ದೋಷಗಳಿಗೆ ಕಾರಣವಾಗುತ್ತದೆ. ಪ್ರತಿ 20 ನಿಮಿಷಕ್ಕೋಮ್ಮೆ ಕಂಪ್ಯೂಟರ್ ಪರದೆಯಿಂದ ಕನಿಷ್ಠ 20 ಸೆಕೆಂಡ್ ಕಾಲ

ಬೇರೆಡೆಗೆ ದೃಷ್ಠಿ ಹರಿಸಬೇಕು ಮತ್ತು ದ್ಯರ ಸಲಹೆ ಪಡೆಯದೇ ಯಾವುದೇ ಔಷಧಿಗಳನ್ನು ಕಣ್ಣಿಗೆ ಉಪಯೋಗಿಸಬಾರದು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ 14 ದೃಷ್ಠಿ ಕೇಂದ್ರಗಳು ಸಾರ್ವಜನಿಕರ ಸೇವೆಗೆ ಲಭ್ಯವಿದ್ದು, ಅಂಕೋಲಾ, ಭಟ್ಕಳ, ಹಳಿಯಾಳ,

ಹೊನ್ನಾವರ, ಕುಮಟಾ, ಮುಂಡಗೋಡು, ಸಿದ್ದಾಪುರ, ಶಿರಸಿ, ಸುಪಾ, ಯಲ್ಲಾಪುರ ತಾಲೂಕು ಆಸ್ಪತ್ರೆಗಳಲ್ಲಿ, ಶಿರಾಲಿ, ದಾಂಡೇಲಿ, ಪಾಳ ಸಮುದಯ

ಆರೋಗ್ಯ ಕೇಂದ್ರಗಳಲ್ಲಿ ಮತ್ತು ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸಲಿದ್ದು, ಜಿಲ್ಲೆ ಸಾರ್ವಜನಿಕರು ಈ ಕೇಂದ್ರಗಳ

ಪ್ರಯೋಜನ ಪಡೆದು, ತಮ್ಮ ದೃಷ್ಠಿ ದೋಷ ಸಂಬಂದಿಸಿದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಕನ್ನಡಕಗಳನ್ನು ಉಚಿತವಾಗಿ

ಪಡೆಯಬಹುದಾಗಿದೆ.:ಡಾ.ಶಂಕರ್ ರಾವ್, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net