

ಚಿಕ್ಕಮಗಳೂರು: ಕಾಫಿನಾಡಲ್ಲಿ ಮಂಗಳವಾರ ಕರೊನಾ ಸೋಂಕಿಗೆ ಒಳಗಾಗಿದ್ದ ಓರ್ವ ವ್ಯಕ್ತಿ ಮೃತಪಟ್ಟಿದ್ದು 14 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಸೋಮವಾರ ಒಂದೇ ದಿನ 25 ಪ್ರಕರಣ ಪತ್ತೆಯಾಗಿತ್ತು.
ಮಂಗಳವಾರ ಪತ್ತೆಯಾದವರಲ್ಲಿ 12 ಮಂದಿ ಹೋಂ ಐಸೊಲೇಶನ್ ಹಾಗೂ ಇಬ್ಬರು ಡಿಸಿಎಚ್‍ಸಿ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐವರು ಗುಣಹೊಂದಿ ಬಿಡುಗಡೆಯಾಗಿದ್ದಾರೆ. ಚಿಕ್ಕಮಗಳೂರು ನಗರದ 69 ವರ್ಷದ ಪುರುಷ ಮೃತಪಟ್ಟಿದ್ದಾರೆ. ಇದುವರೆಗೆ 14,233 ಜನರಲ್ಲಿ ಕರೊನಾ ಪತ್ತೆಯಾಗಿದ್ದು 13,969 ಸಂಪೂರ್ಣ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. 120 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.