14 ತೆಂಗಿನ ಮರ ಉರುಳಿಸಿದ ಕಾಡಾನೆ ಹಿಂಡು

elll
ಅರೆನೂರು ಗ್ರಾಮದ ಮಲ್ಲೇಶ್ ಗೌಡ ಅವರ ತೋಟದಲ್ಲಿ ತೆಂಗಿನ ಮರಗಳನ್ನು ಉರುಳಿಸಿರುವುದು.
Published on

ಆಲ್ದೂರು: ಅರೆನೂರು ಗ್ರಾಮದ ಮಲ್ಲೇಶ್ ಗೌಡ ಅವರ ತೋಟದಲ್ಲಿ ಗುರುವಾರ ಕಾಡಾನೆಗಳು 14 ತೆಂಗಿನ ಮರಗಳನ್ನು ಮುರಿದು ಹಾಕಿವೆ. ಹೋಬಳಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜನ ಆತಂಕದಲ್ಲಿ ವಾಸಿಸುವಂತಾಗಿದೆ.

ಆಲ್ದೂರು, ಮೂಡಿಗೆರೆ, ಚಿಕ್ಕಮಗಳೂರು ಅರಣ್ಯ ಇಲಾಖೆಯಿಂದ ಕಾಡಾನೆಗಳನ್ನು ಅಟ್ಟುವ ಕಾರ್ಯಾಚರಣೆ ನಡೆಯುತ್ತಿದೆ. ಕಂಚಿನಕಲ್ ದುರ್ಗಾ ಗ್ರಾಮದ ಬಳಿ ಭುವನೇಶ್ವರಿ ಸೇರಿ ಒಟ್ಟು 4 ಕಾಡಾನೆಗಳಿದ್ದು, ಇದರಲ್ಲಿ ಎರಡು ಮರಿ ಆನೆಗಳಿವೆ. ಸುತ್ತಲಿನ ಕಾಫಿ ತೋಟಗಳ ಮಾಲೀಕರು ಪಟಾಕಿ ಸಿಡಿಸುವುದರಿಂದ ಆನೆಗಳು ಹಿಂತಿರುಗಿ ಕಂಚಿನಕಲ್ ದುರ್ಗಾದ ಸುತ್ತಲಿನ ಕಾಫಿ ತೋಟ ಹಾಗೂ ಅರಣ್ಯ ಪ್ರದೇಶಕ್ಕೆ ಬರುತ್ತಿವೆ. ಹೀಗಾಗಿ ಕಾಡಾನೆಗಳನ್ನು ಯಾವ ಕಡೆಗೆ ಓಡಿಸಬೇಕು ಎಂಬುದೇ ಅರಣ್ಯ ಇಲಾಖೆಗೆ ತಿಳಿಯದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net