ಜಿಲ್ಲೆಯಲ್ಲಿ ೧೪.೬೨ ಮಿ.ಮೀ. ಮಳೆ

download
Published on

ಮಡಿಕೇರಿ: ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೧೪.೬೨ ಮಿ.ಮೀ. ಮಳೆಯಾಗಿದೆ.

ಕಳೆದ ವರ್ಷ ಇದೇ ದಿನ ೪೫.೧೬ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ೩೫೬.೯೦ ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ೮೯೧ ಮಿ.ಮೀ ಮಳೆಯಾಗಿತ್ತು.


ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೩೧.೮೫ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೪.೦೮ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೭.೯೨ ಮಿ.ಮೀ. ಮಳೆಯಾಗಿದೆ.


ಜಿಲ್ಲೆಯಲ್ಲಿ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೨೨.೨೦, ನಾಪೋಕ್ಲು ೭.೨೦, ಸಂಪಾಜೆ ೬೪, ಭಾಗಮಂಡಲ ೩೪, ವಿರಾಜಪೇಟೆ ಕಸಬಾ ೬.೮೦, ಹುದಿಕೇರಿ ೧೧.೪೦, ಶ್ರೀಮಂಗಲ ೩.೮೦, ಪೊನ್ನಂಪೇಟೆ ೨, ಬಾಳೆಲೆ ೦.೪೫, ಸೋಮವಾರಪೇಟೆ ಕಸಬಾ ೧೦, ಶನಿವಾರಸಂತೆ ೨.೪೦, ಶಾಂತಳ್ಳಿ ೨೦.೪೦, ಕೊಡ್ಲಿಪೇಟೆ ೧.೬೦, ಕುಶಾಲನಗರ ೩.೮೦, ಸುಂಟಿಕೊಪ್ಪ ೯.೩೦ ಮಿ.ಮೀ.ಮಳೆಯಾಗಿದೆ.


ಹಾರಂಗಿ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳಾಗಿದ್ದು, ೨೮೨೨.೬೧ ಅಡಿ ನೀರಿದೆ. ಇಂದಿನ ನೀರಿನ ಒಳಹರಿವು ೧೧೧೦ ಕ್ಯೂಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೩೦ ಕ್ಯೂಸೆಕ್, ನಾಲೆಗೆ ೨೦ ಕ್ಯೂಸೆಕ್ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net