13ರಂದು ನರೇನಾಳ್‌ನಲ್ಲಿ ಅನುಭಾವ ಶ್ರಾವಣ

Untitled--00001
Published on

ಚಿತ್ರದುರ್ಗ:ಮುರುಘಾಮಠದಿಂದ ಚಿತ್ರದುರ್ಗ ತಾಲೂಕು ನರೇನಾಳ್ ಗ್ರಾಮದ ವೀರಮಲ್ಲಮ್ಮ ದೇವಾಲಯದಲ್ಲಿ ಆ.13ರಂದು ಸಂಜೆ 6 ಗಂಟೆಗೆ ಅನುಭಾವ ಶ್ರಾವಣ ಕಾರ‌್ಯಕ್ರಮ ಏರ್ಪಡಿಸಲಾಗಿದೆ. ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಡಿವಾಳ ಮಾಚಿದೇವ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ.ಶಿವಾನುಭವ ಗೋಷ್ಠಿಯಲ್ಲಿ ದೇವನೂರು ಗುರುಮಲ್ಲೇಶ್ವರರ ವಿಷಯ ಕುರಿತು ನಿವೃತ್ತ ಪ್ರಾಚಾರ್ಯ ಜಿ.ಎಸ್.ಕೆಂಚಪ್ಪ ಉಪನ್ಯಾಸ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net