13ರಂದು ಜಾನಪದ ಉತ್ಸವ

ctd--------1
Published on

ಚಿತ್ರದುರ್ಗ: ಮದಕರಿ ಯುವ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಿ.13ರಂದು ಬೆಳಗ್ಗೆ 10.30ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ಜಾನಪದ ಉತ್ಸವ ಏರ್ಪಡಿಸಲಾಗಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯ ಡಾ.ಜೆ. ಕರಿಯಪ್ಪ ಮಾಳಿಗೆ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಎಸ್.ಕೆ. ಮಲ್ಲಿಕಾರ್ಜನ್, ವದ್ದಿಕೆರೆ ಶ್ರೀ ಗುರು ಕರಿಬಸವೇಶ್ವರಸ್ವಾಮಿ ಮಠದ ವದ್ದಿಕೆರೆ ಕಾಂತರಾಜು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎ.ನಾಗರಾಜ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಡಿ. ಗೋಪಾಲಸ್ವಾಮಿ ನಾಯಕ್, ಶ್ರೀನಿವಾಸ್ ಮಳಲಿ ಭಾಗವಹಿಸುವರು. ಗಾರಡಿ ಗೊಂಬೆ,ನಾಸಿಕ್‌ಡೋಲ್, ಕೀಲುಕುದುರೆ, ನವಿಲು ಕುಣಿತ, ನಂದಿಧ್ವಜ, ಜಾನಪದ ಸಂಗೀತ, ಭಜನೆ, ಕೋಲಾಟ, ಕಹಳೆ, ಗೊರವ ಕುಣಿತ ತತ್ವ ಪದಗಳ ಗಾಯನವಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net