

ಚಿತ್ರದುರ್ಗ: ವಿಶ್ವ ಯುವ ಕೌಶಲ್ಯ ದಿನಾಚರಣೆ ಅಂಗವಾಗಿ ಯುವ ಜನತೆಯಲ್ಲಿ ಕೌಶಲ್ಯಾಭಿವೃದ್ಧಿ ಮಹತ್ವದ ಕುರಿತ ಜಾಗೃತಿಗಾಗಿ ಕೌಶಲ್ಯಾಭಿವೃ ದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವಿಶ್ವ ಕೌಶಲ್ಯದಿನಾಚರಣೆ ಅಂಗವಾಗಿ‘ಕೈಗಾರಿಕೆ-ಶೈಕ್ಷಣಿಕ ಒಗ್ಗೂಡಿವಿಕೆಯಿಂದ ಕೌಶಲ್ಯದ ಅಂತರವನ್ನು ಕಡಿಮೆ ಮಾಡುವುದು’ಎಂಬ ವಿಷಯದ ಕುರಿತು ಜುಲೈ 15ರಂದು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ದಾವಣಗೆರೆ ವಿವಿ ಜಿ.ಆರ್.ಹಳ್ಳಿಯ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎಂ.ಕಾಂ ವಿದ್ಯಾರ್ಥಿನಿ ಎಸ್.ಅಪೂರ್ವ ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರಥಮ ಸ್ಥಾನ ಪಡದೆ ಅಪೂರ್ವ ಅವರಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಪ್ರಮಾಣ ಪತ್ರವನ್ನು ಶುಕ್ರವಾರ ವಿತರಿಸಿ, ತಮ್ಮ ಕಾರ‌್ಯಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಲಿಸಿದೆ. ವಿಜೇತ ಅಭ್ಯರ್ಥಿಗೆ ಕೌಶಲ್ಯ ಸ್ಫೂರ್ತಿ ಶೀರ್ಷಿಕೆಯಡಿ ಜಿಲ್ಲಾಧಿಕಾರಿ ಅವರೊಂದಿಗೆ ಒಂದು ದಿನ ಕಾರ್ಯಕ್ರಮದಡಿ ಭಾಗವಹಿಸಲು ಅವಕಾಶವನ್ನು ಇಲಾಖೆ ಕಲ್ಪಿಸಿತ್ತು. ಜಿಲ್ಲಾಧಿಕಾರಿ ಅವರ ದಿನದ ಕಚೇರಿ ಕಾರ‌್ಯ ಚಟುವಟಿಕೆಗಳ ವೀಕ್ಷಣೆಗೆ ಅವಕಾಶ ದೊರಕಿದ್ದಕ್ಕೆ ಅಪೂರ್ವ ಹರ್ಷ ವ್ಯಕ್ತಪಡಿಸಿದರು. ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸಾಗುವ ವಿಶ್ವಾಸ ವ್ಯಕ್ತಪಡಿಸಿದರು.