1,32,41,667 ರೂ. ಉಳಿತಾಯ ಬಜೆಟ್ ಮಂಡನೆ

24-KGL-3
Published on

ಕೊಳ್ಳೇಗಾಲ: ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ನಡೆದ 2025-26 ನೇ ಸಾಲಿನ ಆಯವ್ಯಯ ಸಭೆಯಲ್ಲಿ ನಗರಸಭಾಧ್ಯಕ್ಷೆ ರೇಖಾ ರಮೇಶ್ ಅವರು 1,32,41, 667 ರೂ.ಉಳಿತಾಯ ಬಜೆಟ್ ಮಂಡಿಸಿದರು.

ಪ್ರಾರಂಭಿಕ ಶಿಲ್ಕು 14,66,33,667 ರೂ.ಹಾಗೂ 36, 89,65,000 ರೂ.ಜಮೆ ಒಳಗೊಂಡಂತೆ 51,55, 98, 667 ರೂ.ಗಳ ಆಯ ವ್ಯಯವನ್ನು ಮಂಡಿಸಿದರು.

ಸ್ವಂತ ಮೂಲಗಳಿಂದ 11.55, 03,000 ರೂ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ 25,34,62,000 ರೂ.ಸೇರಿದಂತೆ ಒಟ್ಟು 36,89,65,000 ರೂ. ಆದಾಯ ನಿರೀಕ್ಷಿಸಲಾಗಿದ್ದು, ಇದರಲ್ಲಿ 50,23,57,000 ರೂ.ವೆಚ್ಚ ಮಾಡಲಾಗಿದೆ.

2025-26ನೇ ಸಾಲಿನ ಆಯವ್ಯಯದಲ್ಲಿ ಶ್ರೀಮಹದೇಶ್ವರ ಕಾಲೇಜಿನ ಒಳಾಂಗಣ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಲು ಎಸ್‌ಎಫ್‌ಸಿ ಅನುದಾನದಿಂದ ಉದ್ದೇಶಿಸಲಾಗಿದೆ. ಎಸ್‌ಎಫ್‌ಸಿ 50 ಲಕ್ಷ ರೂ.ವೆಚ್ಚವ ನ್ನು ವಿದ್ಯುತ್ ಚಿತಾಗಾರಕ್ಕೆ ಮೀಸಲಿಡಲಾಗಿದೆ. ಎಲ್ಲ ವಾರ್ಡ್ ಗಳ ಅಭಿವೃದ್ಧಿಗೆ ಎಸ್‌ಎಫ್‌ಸಿ 200 ಲಕ್ಷ ರೂ.ನೀಡಲಾಗಿದೆ. ನಗರಸಭೆ ವ್ಯಾಪ್ತಿಯ ಕೆರೆಗಳನ್ನು ಬಾಹ್ಯ ನೆರವಿನಿಂದ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಇತರ ಹಲವು ಕಾಮಗಾರಿಗಳಿಗೆ ಮೀಸಲಿಡಲಾಗಿದೆ.

ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ನಗರಸಭೆ ಪೌರಾಯುಕ್ತ ಎ.ರಮೇಶ್ ಹಾಗೂ ನಗರಸಭೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net