ಔಷಧದ ಹೆಸರಿನಲ್ಲಿ ಮದ್ಯ ಸಾಗಣೆ ಕಂಟೇನರ್ ಲಾರಿಯಲ್ಲಿತ್ತು 30 ಸಾವಿರ ಲೀಟರ್ ಮದ್ಯ

IMG-20220718-WA0023.jpg
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಚೆಕ್ ಪೋಸ್ಟ್ ಗಳಲ್ಲಿ ಔಷಧದ ನಕಲಿ ಬಿಲ್ ತೋರಿಸಿ ಗೋವಾ ಮದ್ಯ ಸಾಗಿಸುತ್ತಿದ್ದ ಕಂಟೇನರ್ ಲಾರಿಯನ್ನು ಉತ್ತರ ಕನ್ನಡ ಜಿಲ್ಲಾ ವಿಶೇಷ ತನಿಖಾ ದಳದ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ಗೋವಾದಿಂದ ಕಾರವಾರ ಮಾರ್ಗವಾಗಿ ಹೈದ್ರಾಬಾದ್‌ಗೆ ತೆರಳುತ್ತಿದ್ದ ಲಾರಿಯಲ್ಲಿ ,26.29ಲಕ್ಷ ರೂ. ಮೌಲ್ಯದ 30,213 ಲೀಟರ್(814 ಬಾಕ್ಸ್) ಅಕ್ರಮ ಮದ್ಯವನ್ನು ನಗರದ ಬಿಣಗಾ ಬಳಿ ವಶಕ್ಕೆ ಪಡೆಯಲಾಗಿದೆ. ಚಾಲಕ ಮಹಾರಾಷ್ಟ್ರದ ಬೀಡ ಜಿಲ್ಲೆಯ ಸುಧಾಕರ ಅರ್ಜುನ ಗೋಲಾಂಡೆ ಎಂಬುವವನನ್ನು ಬಂಧಿಸಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ವಿಶೇಷ ತನಿಖಾ ದಳದ ಪಿಎಸ್‌ಐ ಪ್ರೇಮನಗೌಡ ಪಾಟೀಲ್, ಸಿಬ್ಬಂದಿ ರಾಘವೇಂದ್ರ ನಾಯ್ಕ, ಭಗವಾನ್ ಗಾಂವಕರ್, ಸಂತೋಷಕುಮಾರ ಕೆ.ಬಿ., ಉಮೇಶ ಗಾಳಿ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.
.........

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net