13 ಶಿಕ್ಷಕರಿಗೆ 'ಶಿಷ್ಯರು ಮೆಚ್ಚಿದ ಗುರು' ಪ್ರಶಸ್ತಿ

Published on

ಮೈಸೂರು: ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಿಂದ ಜಂಟಿಯಾಗಿ ನೀಡಲಾಗುತ್ತಿರುವ ‘ಶಿಷ್ಯರು ಮೆಚ್ಚಿದ ಗುರು’ ಪ್ರಶಸ್ತಿಗೆ 13 ಜನರನ್ನು ಆಯ್ಕೆ ಮಾಡಲಾಗಿದೆ.
10ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಈ ಬಾರಿ ಮೈಸೂರು ವಿಭಾಗಮಟ್ಟದ ಈ ಪ್ರಶಸ್ತಿ ನೀಡಲಾಗುತ್ತಿದೆ. ಮೈಸೂರು ತಾಲೂಕಿನಿಂದ ಟಿ.ಆರ್.ಶಂಕರಪ್ಪ (ಪ್ರಾಥಮಿಕ ಶಿಕ್ಷಣ), ಮೈಸೂರಿನ ಎಸ್.ಹರ್ಷ (ಪ್ರೌಢಶಿಕ್ಷಣ), ಎಚ್.ಕೆ.ರಾಮಚಂದ್ರ (ಕೈಗಾರಿಕಾ ತರಬೇತಿ), ಜಿ.ಅಮರನಾಥ (ಡಿಪ್ಲೊಮಾ), ಡಾ.ಎಂ.ಆರ್.ಪೂಜಾ (ಇಂಜಿನಿಯರಿಂಗ್ ಶಿಕ್ಷಣ), ಲಕ್ಷ್ಮೇಗೌಡ (ವೈದ್ಯಕೀಯ ಶಿಕ್ಷಣ), ಡಾ. ಎಂ.ಎನ್.ಸಂಜಿತ್ (ಕಾನೂನು ಶಿಕ್ಷಣ), ಎಂ.ಎಸ್.ಪರಮಶಿವಯ್ಯ (ದೈಹಿಕ ಶಿಕ್ಷಣ), ಡಾ.ಬಿ.ಪಿ.ಮೂರ್ತಿ (ಯೋಗ ಶಿಕ್ಷಣ), ಮಂಡ್ಯದ ಜಿ.ಎಂ.ಸತೀಶ್ (ಸ್ಪರ್ಧಾತ್ಮಕ ಶಿಕ್ಷಣ), ಎಸ್.ಸುನೀತಾ (ನೃತ್ಯಕಲೆ ಶಿಕ್ಷಣ), ಹಾಸನದ ಪ್ರೊ.ಎಂ.ಎಸ್. ಮನೋನ್ಮಣಿ (ಪದವಿ ಶಿಕ್ಷಣ), ಕೊಡಗು ಸಿದ್ದರಾಜು ಬೆಳ್ಳಯ್ಯ (ಪದವಿ ಪೂರ್ವ ಶಿಕ್ಷಣ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net