13 ಕ್ವಿಂಟಾಲ್​ ಅನ್ನಭಾಗ್ಯ ಅಕ್ಕಿ ವಶ

images (1)
Published on

ಅಥಣಿ ಗ್ರಾಮೀಣ: ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದ ದೇಸಾರಹಟ್ಟಿ ಬಳಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನದ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಐಗಳಿ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ 30 ಮೂಟೆ ಅಕ್ಕಿ ಹಾಗೂ ಒಂದು ಟಾಟಾ ಎಸ್​ ವಾಹನ ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ದಂಧೆಕೋರರು ಕಡಿಮೆ ಹಣ ನೀಡಿ ಹಲವು ಗ್ರಾಮಗಳಲ್ಲಿ ಪಡಿತರದಾರರಿಂದ ಅಕ್ಕಿ ಪಡೆದು ಕೊಕಟನೂರ, ದೇಸಾಯರಹಟ್ಟಿ ಮಾರ್ಗವಾಗಿ ಪಕ್ಕದ ಮಹಾರಾಷ್ಟ್ರಕ್ಕೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿರುವಾಗ ದಾಳಿ ನಡೆಸಲಾಗಿದೆ. ವಾಹನ ಚಾಲಕ ಹಾಗೂ ಮತ್ತೋರ್ವ ವ್ಯಕ್ತಿ ಪರಾರಿಯಾಗಿದ್ದು, ಟಾಟಾ ಎಸ್​ ವಾಹನ ಹಾಗೂ 44 ಸಾವಿರ ರೂ. ಮೊತ್ತದ 13 ಕ್ವಿಂಟಾಲ್​ 64 ಕೆಜಿ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಐಗಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಹಾರ ಇಲಾಖೆ ತಹಸೀಲ್ದಾರ್​ ಸಿದ್ದರಾಯ ಭೋಸಗಿ ಮಾರ್ಗದರ್ಶನದಲ್ಲಿ ಅಥಣಿ ಆಹಾರ ನಿರೀಕ್ಷಕ ಪ್ರತಾಪ್​ ರಾಯಕರ, ಐಗಳಿ ಪಿಎಸ್​ಐ ಚಂದ್ರಶೇಖರ ಸಾರಗೊಂಡ, ಸಿಬ್ಬಂದಿ ಜಿ.ಪಿ.ರಾಠೋಡ, ಸಂಜು ಸನಗೊಂಡ, ಅಕ್ಬರ್​ ಮುಜಾವರ್​, ಡಿ.ಟಿ.ಶಾನವಾಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net